~~~~~~~~~~ನುಡಿಮುತ್ತುಗಳು ~~~~~~~~~~
ü ಘನಕಾರ್ಯಗಳನ್ನು ನಮ್ಮಿಂದ ಮಾಡಿಸಬಲ್ಲ ಶಕ್ತಿ ಪ್ರೇಮ ಮತ್ತು ಆಶೆಗೆ ಇದೆ.
ü ಜನರನ್ನು ಮುನ್ನಡೆಸುವ ಹೊಣೆ ಇರುವ ನಾಯಕನಿಗೆ ಇರಲೇಬೇಕಾದ ಮುಖ್ಯ ಗುಣ ತಾಳ್ಮೆ ಆಂದ್ರೆ ಮಾಲ್ರೋ
ü ಪ್ರೇಮ ಸದಾ ಕೊಡುತ್ತದೆ:
ಎಂದೂ
ಕೇಳುವುದಿಲ್ಲ.
ü ಧೈರ್ಯಶಾಲಿಗಳೇ ಸೌಂದರ್ಯವನ್ನು ಅನುಭವಿಸಲು ಹಕ್ಕುಳ್ಳವರು.
ü ಬೆಳಕು ಎಲ್ಲಿಂದ ಬಂದರೂ ಅದಕ್ಕೆ ಸ್ವಾಗತ; ಅದರೆ ನಾವು ನಿಂತ ನೆಲ ಕುಸಿಯದಂತೆ ಎಚ್ಚರದಿಂದಿರಬೇಕು.
ü ಜಗತ್ತಿನ ಎಲ್ಲ ಒಳ್ಳೆಯ ಯೋಚನೆಗಳೂ ಒಂದು ಒಳ್ಳೆಯ ಕೆಲಸದ ತೂಕ ಇಲ್ಲ.
ü ಯಾವ ಸರ್ಕಾರಕ್ಕೆ ಜನರನ್ನು ಸುಖಿಗಳನ್ನಾಗಿಸಬೇಕೆಂಬ ಅಪೇಕ್ಷೆ ಇದೆಯೋ ಯಾವ ಸರ್ಕಾರ ಅದನ್ನು ಸಾಧಿಸುವ ರೀತಿ
ತಿಳಿದಿದೆಯೋ ಅದೇ ಶ್ರೇಷ್ಠ ಸರ್ಕಾರ
ü ಧೈರ್ಯ ಇಲ್ಲದೆ ತುಂಬಿಕೊಂಡ ಜ್ಞಾನದಿಂದ ಏನು ಪ್ರಯೋಜನ? ಹೊರತೆಗೆಯದ ಕೊಪ್ಪರಿಗೆ ಹಣದ ಹಾಗೆ.
ü ಬಾಳಿನ ಹೋರಾಟದಲ್ಲಿ ಸೋಲುಗಳಿಗೆ ಗೆಲುವುಗಳಷ್ಟೇ ಬೆಲೆ. ಸೋಲುಗಳ ತಿಳಿವಿನಿಂದಲೇ ಗೆಲವು ಸಾಧ್ಯವಾಯಿತು.
ü ಯಾರೂ ಸದಾ ಜಯಿಸುವುದಿಲ್ಲ. ಪ್ರತಿಯೊಬ್ಬ ಮನುಷ್ಯ ಗೆದ್ದಾಗಲೂ ಸೋತವನೊಬ್ಬನಾದರೂ ಇದ್ದೇ ಇರುತ್ತಾನೆ.
ü ಪ್ರಜಾಪ್ರಭುತ್ವದಲ್ಲಿ ಬಲಿಷ್ಠನಿಗಿರುವಷ್ಟೇ ಅವಕಾಶಗಳು ದುರ್ಬಲನಿಗೂ ಇರಬೇಕು.
üನಮ್ಮ ಬಗ್ಗೆ ನಾವೇ ನಗುವಂತಾದಾಗ ಮಾತ್ರವೇ ಆತ್ಮಪ್ರತಿಷ್ಠೆಯ ಅಪಾಯದಿಂದ ಪಾರಾಗಬಲ್ಲೆವು
ü ಅಭಿಪ್ರಾಯ ಬೇಧವೆಂದರೆ ಎಂದೂ ದ್ವೇಷವೆಂದಲ್ಲ; ಭಿನ್ನಾಭಿಪ್ರಾಯ ಇಲ್ಲದ ಇಬ್ಬರನ್ನು ನಾನು ಪ್ರಪಂಚದಲ್ಲಿ ನೋಡಿಲ್ಲ.
ü ಚಿಂತನೆಯಿಂದ ಬುದ್ಧಿವಂತನಾಗಬಹುದಾದರೂ, ತಿಳಿವು ಬರುವುದು ಓದಿನಿಂದ.
ü ಜೀವನವನ್ನು ಬಿಟ್ಟು ಬೇರೆ ಐಶ್ವರ್ಯ ಇಲ್ಲ
ü ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಳ್ಳಿ. ಹಾಗೆ ಮಾಡದಿದ್ದಲ್ಲಿ ಪರಿಸ್ಥಿತಿ ಇನ್ನೂ ಹದಗೆಡುತ್ತದೆ.
ü ಜೀವನದಿಂದಲೇ ದೇವರು ಉದ್ಭವಿಸಬೇಕು, ಬೆಳೆಯಬೇಕು; ಹಿರಿಯವನಾಗಬೇಕು.
ಎಷ್ಟುಎಷ್ಟು ನಮ್ಮ ಜೀವನ ಹಿರಿದೋ ಅಷ್ಟು ಅಷ್ಟು ದೇವರೂ ಹಿರಿದು.
ü ಇಂದು ಮಾಡಬಹುದಾದದ್ದನ್ನು ನಾಳೆ ಮಾಡೋಣ ಎಂದು ಎಂದೂ ಬಿಡಬೇಡ.
ü ನಾಲಿಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವುದೇ ಮೊದಲ ಸದ್ಗುಣ.
ü ಮನುಷ್ಯನ ನಿಜವಾದ ಆಸ್ತಿ ನೆನಪು. ಅವನು ಬಡವನಲ್ಲ, ಶ್ರೀಮಂತನೂ ಅಲ್ಲ.
ü ಉಪದೇಶ ಅನೇಕರಿಗೆ ದೊರೆಯುವುದಾದರೂ ಅದರ ಲಾಭ ಪಡೆಯುವವರು ಎಲ್ಲೋ ಕೆಲವರು.
ü ಅತಿ ಕಡಿಮೆ ಯಾರಿಗೆ ಬೇಕೋ ಅವರು ದೇವರಿಗೆ ಅತಿ ಸಮೀಪ ಇರುತ್ತಾರೆ
ü ಸಂತೋಷ ಎನ್ನುವುದು ನಮ್ಮನ್ನೇ ಅವಲಂಬಿಸಿದೆ
ü ನಮ್ಮ ಯೋಗಕ್ಷೇಮವನ್ನು ಈಶ್ವರನಿಗೆ ವಹಿಸಿ, ಆತ್ಮವಂತರಾಗಿ ಬದುಕಬೇಕೆಂಬುದನ್ನು ನೆನಪು ಮಾಡಿಕೊಳ್ಳುವ ದಿನವೇ `ಯುಗಾದಿ'
ü ಎರಡು ಧರ್ಮಗಳ ನಡುವೆ ಎಂದೂ ಜಗಳವಿಲ್ಲ; ಎಲ್ಲ ಧರ್ಮಗಳ ಜಗಳವೂ ಅಧರ್ಮದೊಂದಿಗೆ.
ü ಮನುಷ್ಯನಿಗೆ ಕಾಣುವುದಕ್ಕಿಂತ ಹೆಚ್ಚು ಸಂತೋಷ ಲೋಕದಲ್ಲಿದೆ
ü ಸಂತೋಷ ಎನ್ನುವುದು ನಮ್ಮನ್ನೇ ಅವಲಂಬಿಸಿದೆ
ü ಯಾರಿಗೆ ಯಾವುದು ಧರ್ಮವೋ ಅವರು ಅದನ್ನೇ ದೊಡ್ಡದೆಂದು ತಿಳಿದು ನಡೆಯಬೇಕು.
ü ಕೆಲಸದ ಆರಂಭದಲ್ಲಿ ತೋರುವ ಎಚ್ಚರ, ಶ್ರದ್ಧೆಗಳನ್ನು ಕೊನೆಯಲ್ಲೂ ತೋರಿದರೆ ಎಂದೂ ಸೋಲು ಇರದು.
ü ಹೇಡಿಗಳು ಅನೇಕ ಸಲ ಸಾಯುತ್ತಾರೆ. ಧೈರ್ಯಶಾಲಿಗಳು ಸಾಯುವುದು ಒಂದೇ ಸಲ.
ü ಸತ್ಯ, ಸ್ವಾತಂತ್ರ್ಯಗಳೇ ಸಮಾಜದ ಆಧಾರ ಸ್ಥಂಭಗಳು.
ü ಉಪಕಾರವ ಮರೆವುದು ಲೇಸಲ್ಲ; ಅಪಕಾರವ ಅಂದೇ ಮರೆವುದು ಲೇಸು.
ü ನಮ್ಮಲ್ಲಿ ನಮಗಿರುವ ಅಪನಂಬಿಕೆಯೇ ಘೋರವಾದ ಅಪನಂಬಿಕೆ.
ü ನಿಧಾನವಾಗಿ ಕಲಿಯುವುದು ಕಲಿಯದಿರುವುದಕ್ಕಿಂತ ಲೇಸು.
ü ಯಾರು ಸ್ವದೇಶವನ್ನು ಪ್ರೀತಿಸಲಾರನೋ ಅವನು ಏನನ್ನೂ ಪ್ರೀತಿಸಲಾರ.
ü ಸಂಸಾರದ ಆಳಕ್ಕೆ ಅಂಜಬೇಡ. ನೀನು ಈಸಬೇಕಾದದ್ದು ಮೇಲೆ ತಾನೇ?
ü ವ್ಯಕ್ತಿಯಾಗಲಿ ದೇಶವಾಗಲಿ ಬಯಸಿದ್ದೆಲ್ಲಾ ಅವರ ಆಯುಷ್ಯದಲ್ಲೇ ಕೈಗೂಡುವುದು ಬಹಳ ಅಪರೂಪ.
ü ಇರುವುದಕ್ಕೆ ಸಂತೋಷಿಸಿ, ಇಲ್ಲದುದಕ್ಕೆ ದುಃಖಿಸದವನು ಬುದ್ಧಿವಂತ.
ü ನಮ್ಮ ಬದುಕು ದೊಡ್ಡದಾಗದೆ ನಮ್ಮ ಸಾಹಿತ್ಯ ಎಂದೂ ದೊಡ್ಡದಾಗದು.
ü ಯಾವುದೂ ಸಂಪೂರ್ಣ ಒಳ್ಳೆಯದಲ್ಲ; ಯಾವುದೂ ಸಂಪೂರ್ಣ ಕೆಟ್ಟದ್ದಲ್ಲ.
ü ಗುರಿ ಮುಟ್ಟುವುದಕ್ಕಿಂತ ಭರವಸೆಯಿಂದ ಪ್ರಯಾಣ ಮಾಡುವುದು ಲೇಸು.
ü ನಾವು ಹಿಡಿಯುವ ದಾರಿಯಂತೆಯೇ ನಮ್ಮ ಗುರಿ ಸಹ ಇರುತ್ತದೆ.
ü ಪ್ರಪಂಚದ ನಿಜವಾದ ಪವಾಡಗಳು ಕಣ್ಣಿಗೆ ಕಾಣದವಲ್ಲ; ಕಾಣುವಂಥವು.
ü ದೊಡ್ಡದಾಗಿ ಹೊತ್ತಿ ಉರಿಯುವ ದೀಪ ಬಹಳ ಹೊತ್ತು ಬೆಳಗುವುದಿಲ್ಲ.
ü ನಂದಾದೀಪದ ಹಾಗೆ ಸಣ್ಣಗೆ, ಮಿನುಗುತ್ತಾ, ಬೆಳಕು ನೀಡುತ್ತಾ ಇರಬೇಕು
ü ಲೋಕದೊಂದಿಗೆ ಹೊಂದಿ ನಡೆವುದನು ಕಲಿಯದವರು ಹಲವ ಕಲಿತರೂ ಅರಿವಿಲ್ಲದವರು.
ü ನಮ್ಮ ಆಲೋಚನೆಗಳೇ ನಮ್ಮ ಜೀವನವನ್ನು ರೂಪಿಸುವುದು.
ü ನಂಬುವುದರಿಂದ ನಾವೇನನ್ನೂ ಕಳೆದುಕೊಳ್ಳುವುದಿಲ್ಲ. ಅಪನಂಬಿಕೆಯಂಥ ಅಪಾಯಕಾರಿ ಜೊತೆಗಾರನಿಲ್ಲ.
ü ತಿಳಿಯದಿರುವವನು ಮಾತನಾಡುವುದಿಲ್ಲ, ಮಾತನಾಡುವವನಿಗೆ ತಿಳಿದಿರುವುದಿಲ್ಲ
ü ಎಷ್ಟೋ ಬಾರಿ ಗೆಲುವು ಸೋಲಿನ ರೂಪದಲ್ಲಿ ಬರುತ್ತದೆ.
ü ಯಾವ ಸಾಹಿತ್ಯವೂ ತಾನು ಹುಟ್ಟಿದ ಕಾಲ, ದೇಶದ ಪ್ರಯೋಜನಕ್ಕೆ
ಬಾರದೆ ಎಲ್ಲ ಕಾಲ, ಎಲ್ಲ ದೇಶದ ಸಾಹಿತ್ಯ ಆಗುವುದಿಲ್ಲ.
ü ಜ್ಞಾನಕ್ಕೆ ಸಮನಾದ ಪವಿತ್ರ ವಸ್ತು ಬೇರೊಂದಿಲ್ಲ.
ü ದೊಡ್ಡ ಯೋಚನೆಗಳೊಡನೆ ಇರುವವರು ಎಂದೂ ಏಕಾಂಗಿಗಳಲ್ಲ.
ü ಉಪಯೋಗಿಸುತ್ತಿರುವ ಬೀಗದ ಕೈ ಹೊಳೆಯುತ್ತಿರುತ್ತದೆ.
ü ಯಾವುದನ್ನು ನಾವು ಪಡೆಯಲೇ ಬಾರದೋ, ಅದನ್ನೇ ನಾವು ಹೆಚ್ಚು ಅಪೇಕ್ಷಿಸುವುದು.
ü ಹಣ' ಪ್ರಪಂಚವನ್ನು ಮುನ್ನಡೆಸುವ ಶಕ್ತಿ.
ü ದಾನದ ಬಾಗಿಲನ್ನು ತೆರೆಯುವುದು ಕಷ್ಟ; ಮುಚ್ಚುವುದೂ ಕಷ್ಟ.
ü ಇತರರ ಕಣ್ಣೀರನ್ನು ತೊಡೆದುಹಾಕದ ಕರುಣೆ ವ್ಯರ್ಥ.
ü ಜ್ಞಾನ ಒಂದೇ ಒಳ್ಳೆಯದು; ಅಜ್ಞಾನವೊಂದೇ ಕೆಟ್ಟದ್ದು.
ü ದೊಡ್ಡವರ ಜೀವನ ಚರಿತ್ರೆಯೇ ಲೋಕದ ಚರಿತ್ರೆ.
ü ಸಾಮಾನ್ಯ ಜನರ ಚಿಂತೆಯು ಸ್ವಹಿತದ ವೃದ್ಧಿಗೋಸ್ಕರ ಇರುತ್ತದೆ.
ದೊಡ್ಡವರ ಚಿಂತೆಯು ಪರಹಿತದ ವೃದ್ಧಿಗೋಸ್ಕರ ಇರುತ್ತದೆ.
ü ಏನನ್ನೂ ನಿರೀಕ್ಷಿಸದವನು ಸುಖಿ: ಏಕೆಂದರೆ ಅವನಿಗೆ ನಿರಾಶೆ ಎಂಬುದೇ ಇಲ್ಲ.
ü ಸೊಡರೆಣ್ಣೆ ತೀರಿದರೆ ಕೊಡನೆತ್ತಿ ಹುಯ್ಯುವರೆ ಕೊಡಬೇಡ, ಕೊಡದೆ ಇರಬೇಡ, ಧರ್ಮವನು ಬಿಡಬೇಡ
ü ಅಹಂಕಾರ, ಬೆಳೆಯುವ ಗಿಡಕ್ಕೆ ಹತ್ತುವ ರೋಗ.
ü ಯಾವ ಮನುಷ್ಯನೂ ಇನ್ನೊಬ್ಬನ `ಒಪ್ಪಿಗೆ' ಇಲ್ಲದೆ ಅವನನ್ನು ಆಳುವುದಕ್ಕೆ ಸಾಧ್ಯವಿಲ್ಲ.
ü ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ.
ü ನಾವಿರುವುದು ಪ್ರಯತ್ನಿಸಲು, ಸಾಹಸ ಮಾಡಲು, ಕಾಣಲು, ಸೋಲನ್ನೊಪ್ಪದೆ ಜೀವಿಸಲು.
ü ಪಶ್ಚಾತ್ತಾಪ ಅನುಕೂಲ ಇದ್ದಾಗ ನಿದ್ರಿಸುತ್ತದೆ; ಕಷ್ಟ ಬಂದಾಗ ಏಳುತ್ತದೆ.
ü ಹೆಣ್ಣಿನ ಜನ್ಮವೆಂದರೆ ಅನಂತವಾದ ಸಹನಶೀಲತೆಯ ಜನ್ಮ.
ü ಆತ್ಮವಿಶ್ವಾಸ ನಿಧಾನವಾಗಿ ಬೆಳೆಯುವ ಗಿಡ.
ü ನಾವು ಅನುಸರಿಸಬೇಕಾದದ್ದು ಸಂತರ ಚಾರಿತ್ರ್ಯವನ್ನೇ ಹೊರತು ಚರಿತ್ರೆಯನ್ನಲ್ಲ.
ü ಜನಸಮುದಾಯದೊಡನೆ ಹಂಚಿಕೊಳ್ಳಲಾಗದ ಎಲ್ಲ ವಸ್ತುಗಳೂ ನನಗೆ ತ್ಯಾಜ್ಯ.
ü ಸುಖ ಅಪರೂಪಕ್ಕೆ ಬರುವ ನೆಂಟನಾದರೆ ದುಃಖ ಎಂದೂ ನಮ್ಮನ್ನು ಬಿಡುವುದಿಲ್ಲ.
ü ಯಾರು ಹಳ್ಳ ತೋಡುತ್ತಾರೋ ಅವರೇ ಅದರಲ್ಲಿ ಬೀಳುತ್ತಾರೆ.
ü ನಿಂದಾಸ್ತುತಿಗಳೆರಡನ್ನೂ ಸಮಾನವಾಗಿ ಭಾವಿಸಿರುವವನೇ ಉತ್ತಮವಾದ ವ್ಯಕ್ತಿ.
ü ನಾಲಿಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವುದೇ ಮೊದಲ ಸದ್ಗುಣ.
ü ನಗುನಗುತ್ತಾ ಕೆಲಸ ಮಾಡು, ಇತರರೂ ನಗುನಗುತ್ತಾ ಕೆಲಸ ಮಾಡುವಂತೆ ನೋಡಿಕೊ.
ü ಕಣ್ಣು ತೆರೆಯಲು ಜೀವಮಾನವೇ ಬೇಕು. ನೋಡಲು ಕ್ಷಣಾರ್ಧವೇ ಸಾಕು.
ü ಪ್ರಪಂಚದಲ್ಲಿ ಮಾಡುವುದು ಹೆಚ್ಚಾಗಿದೆ; ತಿಳಿಯಬೇಕಾದುದು ಕಡಿಮೆ ಇದೆ.
ü ಬದುಕಿ, ಇತರರನ್ನು ಬದುಕಲು ಬಿಡಿ” ಎಂಬುದೇ ನಮ್ಮ ಜೀವನದ ಮಂತ್ರವಾಗಬೇಕು.
ü ಆತ್ಮೀಯರನ್ನು ಪರಿತ್ಯಾಗ ಮಾಡುವವನೂ, ತನಗಿಂತ ಬಲಾಢ್ಯರನ್ನು ದ್ವೇಷಿಸುವವನೂ ಮೂರ್ಖನು.
ü ಮೌನ ಅನಂತದಷ್ಟು ಆಳವಾದದ್ದು; ಮಾತು ಕುಲದಷ್ಟು ಕ್ಷಣಿಕ.
ü ನಮಗೆ ಇಷ್ಟ ಇರುವಂತೆ ನಾವು ಜೀವಿಸುವುದಿಲ್ಲ; ನಮಗೆ ಸಾಧ್ಯ ಇರುವಂತೆ ನಾವು ಜೀವಿಸುತ್ತೇವೆ.
No comments:
Post a Comment