ನುಡಿಮುತ್ತುಗಳು :~
Ø ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.
Ø ಆರಂಭ ಮಾಡಿದವನು ಅರ್ಧ ಕೆಲಸ ಮಾಡಿದಂತೆಯೇ ,ವಿವೇಕಿ ಆಗು ,ಆರಂಭಿಸು .
Ø ಸೋಲುವುದನ್ನು ಕಲಿಸಿ ,ಅಂತೆಯೇ ಗೆಲುವಿನ ಸಂತಸವನ್ನು ಕಲಿಸಿ.
Ø ಅವನು ಏನು ಕೆಲಸ ಮಾಡಲಾರ ಎನ್ನುವುದನ್ನು ನಾನು ಯೋಚಿಸುವುದಿಲ್ಲ;
ಅವನು ಏನು ಕೆಲಸ ಮಾಡಬಲ್ಲ ಎನ್ನುವುದನ್ನು ನಾನು ಗಮನಿಸುತ್ತೇನೆ .
Ø ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು .
ಮನುಷ್ಯನಿಗೆ ಅವನ ಕೈಗಳಿಗಿಂತ ಅಮೂಲ್ಯವಾದ ಆಸ್ತಿ ಇಲ್ಲ !
Ø ಚಿಕ್ಕದು ಎನ್ನುವ ಕೆಲಸಗಳನ್ನು ಈಗಲೇ ಚೆನ್ನಾಗಿ ಮಾಡು .ಆಗ ದೊಡ್ಡ ಕೆಲಸಗಳು ತಾವಾಗಿಯೇ ನಿನ್ನನ್ನು ಹುಡುಕಿಕೊಂಡು ಬರುತ್ತವೆ.
Ø ಅಸಹನೆಯಿಂದ ಭಾವೋದ್ವೇಗ ,ಅದರಿಂದ ಆತಂಕ ,ಆತಂಕದಿಂದ ಆಪತ್ತು ಬರುತ್ತದೆ .
ಆದ್ದರಿಂದಲೇ ಅಸಹನೆಯಿಂದ ಆಗುವ ಅನಾಹುತಗಳನ್ನು ತಪ್ಪಿಸಬೇಕಾದರೆ ಸಹನೆಯನ್ನು ರೂಢಿ ಮಾಡಿಕೊಳ್ಳಬೇಕು.
Ø ಪರರನ್ನು ಗೌರವಿಸುವುದನ್ನು ಕಲಿಯದಿದ್ದರೆ ,ನಾವೆಂದೂ ದೊಡ್ದವರಾಗುವುದಿಲ್ಲ .
Ø ಯಾರ ಮನೆಯಲ್ಲಿ ಅತಿಥಿ ಸತ್ಕಾರ ಚೆನ್ನಾಗಿ ನಡೆಯುತ್ತದೆ -ಅಲ್ಲಿಯವರೆಗೆ ಅತಿಥಿ ಆ ಮನೆಯಲ್ಲಿ ಇರಬೇಕು
ಸತ್ಕಾರದ ಕೊರತೆ ಕಂಡುಬಂದ ಕೂಡಲೇ ಅಲ್ಲಿಂದ ಹೊರಟು ಬಿಡಬೇಕು .
Ø ಕಾಲ ನಿನಗೆ ಅನುಕೂಲ ಆಗದಿದ್ದಲ್ಲಿ ನೀನೇ ಕಾಲಕ್ಕೆ ಹೊಂದಿಕೋ .
Ø ನನಗೆ ಎಲ್ಲ ಸ್ವಾತಂತ್ರ್ಯ ಸಿಕ್ಕುವ ಮೊದಲು ಅಂತಃಕರಣಕ್ಕೆ ಅನುಸಾರವಾಗಿ ಯೋಚಿಸುವ,
ಒಪ್ಪುವ ಹಾಗೂ ಮಾತನಾಡುವ ಸ್ವಾತಂತ್ರ್ಯ ಬೇಕು.
Ø ಹೆಂಗಸರು ಗಂಡಸರಿಗಿಂತ ಹೆಚ್ಚು ಬುದ್ಧಿವಂತರು, ಏಕೆಂದರೆ ಅವರಿಗೆ ಗೊತ್ತಿರುವುದು ಕಮ್ಮಿ ,ತಿಳುವಳಿಕೆ ಅಧಿಕ .
Ø ಸವಾಲುಗಳನ್ನು ಸ್ವಾಗತಿಸಿ ಜಾಣತನದಿಂದ ಕಲಿಯಲು ಮತ್ತು ಬೆಳೆಯಲು ಪ್ರತಿಯೊಂದು
ಸನ್ನಿವೇಶದಲ್ಲೂ ಅವಕಾಶಕ್ಕಾಗಿ ಎದುರು ನೋಡುತ್ತಿರಿ.
Ø ಎಲ್ಲರ ಪ್ರಶಂಸೆಗೆ ಪಾತ್ರನಾಗುವ ವ್ಯಕ್ತಿಯ ಹಿಂದೆ ,ಯಾರಿಗೂ ಕಾಣದಂತೆ ,ತಮ್ಮ ಅಸ್ತಿತ್ವವನ್ನು ಹೊರಗೆ ತೋರಿಸದೆ ಇರುವ ಸಣ್ಣ ವ್ಯಕ್ತಿಗಳ ಕಾಣಿಕೆ ಇರುತ್ತದೆ.
Ø ಬೇರೆಯವರನ್ನು ತೆಗಳುವುದರಿಂದ ನಿಮ್ಮ ವ್ಯಕ್ತಿತ್ವಕ್ಕೇ ಹೆಚ್ಚು ಕುಂದುಂಟಾಗುತ್ತದೆ .
Ø ಸಮಸ್ಯೆಗಳಿಗಿಂತ ಕೆಲವು ಪರಿಹಾರಗಳೇ ಕೆಟ್ಟದಾಗಿರುತ್ತವೆ.
Ø ಯಾರಾದರೂ ನಿಮ್ಮ ಬಗ್ಗೆ ಕೆಡುಕಾಡಿದರೆ ಬೇಸರ ಏಕೆ ?ನೀವದನ್ನು ಸ್ವೀಕರಿಸಿದರೆ ಮಾತ್ರ ಅದು ನಿಮಗೆ ತಾಗುತ್ತದೆ. ನಿರಾಕರಿಸಿಬಿಡಿ.ನಿಮ್ಮ ಪಾಡಿಗೆ ನೀವಿರಿ.
Ø ಶೂರ ,ವಿದ್ಯಾವಂತ,ಮತ್ತು ಸೇವಾಕಾರ್ಯದಲ್ಲಿ ದಕ್ಷ -ಈ ಮೂವರು ಭೂಮಿಯೆಂಬ ಲತೆಯಿಂದ ಚಿನ್ನದ ಹೂಗಳನ್ನು
ಬಿಡಿಸಿಕೊಳ್ಳುತ್ತಾರೆ.
Ø ಸಂಯಮ ಮತ್ತು ತ್ಯಾಗದ ಹಾದಿಯಿಂದ ಆನಂದ ಮತ್ತು ಶಾಂತಿ ಸ್ಥಾಪನೆ ಸಾಧ್ಯ .
Øವಿಘ್ನ ಭಯದಿಂದ ನೀಚರು ಕೆಲಸವನ್ನೇ ಆರಂಭ ಮಾಡರು . ಕೆಲಸ ಆರಂಭಿಸಿ ವಿಘ್ನ ಬಂದಾಗ ಸುಮ್ಮನಾಗುವವರು ಮಧ್ಯಮರು.
ಗಳಿಗೆ ಗಳಿಗೆಗೂ ವಿಘ್ನ ಎದುರಿಸಿದರೂ ಪ್ರಯತ್ನ ಬಿಡದೆ ಸಾಧಿಸುವವರು ಉತ್ತಮರು .
Ø ನಿಜವಾಗಿಯೂ ಯಾರಿಗೂ ಯಾರೂ ಕಲಿಸಲಿಲ್ಲ .ನಮ್ಮಲ್ಲಿ ಪ್ರತಿಯೊಬ್ಬರೂ ತಮಗೆ ತಾವೇ ಪಾಠ
ಕಲಿಸಬೇಕು.ಬಾಹ್ಯದ ಗುರು ನೀಡುವ ಸಲಹೆಗಳು ಅಂತರಂಗದ ಗುರುವನ್ನು ಜಾಗೃತಗೊಳಿಸಿ
ಕ್ರಿಯಾಶೀಲನನ್ನಾಗಿಸುತ್ತವೆ .ಇದರ ಫಲವಾಗಿ ವಿಚಾರದ ಅರಿವಾಗುವುದು.
Ø ಚಾರಿತ್ರ್ಯವನ್ನು ರೂಪಿಸುವ ,ಮನಸ್ಸಿನ ಶಕ್ತಿಯನ್ನು ಹೆಚ್ಚಿಸುವ,ಬುದ್ಧಿಯನ್ನು ವಿಕಾಸಗೊಳಿಸುವ ಶಿಕ್ಷಣ ನಮಗಿಂದು ಬೇಕು.ಇದರಿಂದ ವ್ಯಕ್ತಿ ಸ್ವಾವಲಂಬಿಯಾಗಿ ತನ್ನ ಕಾಲಮೇಲೆ ತಾನು ನಿಲ್ಲುತ್ತಾನೆ. ಜ್ಞಾನವನ್ನು ಗಳಿಸಲು ಇರುವ ಏಕೈಕ ಮಾರ್ಗ ಏಕಾಗ್ರತೆ.
Ø ಒಂದು ಬಾರಿ ಒಂದು ವಿಷಯವನ್ನು ಮಾತ್ರ ಚಿಂತಿಸಲು ಮನಸ್ಸಿಗೆ ಸಾಧ್ಯ.
Ø ನಮ್ಮ ಮನಸ್ಸು ಅರ್ಥವಿಲ್ಲದ ವಿಷಯಗಳನ್ನು ಚಿಂತಿಸುತ್ತಿದ್ದರೆ ಅರ್ಥಪೂರ್ಣ ಚಿಂತನೆಗಳು ಮನಸ್ಸಿನೊಳಗೆ ಎಂದೂ
ಪ್ರವೇಶಿಸವು .
Ø ಎಲ್ಲರೂ ತಮ್ಮನ್ನು ಬುದ್ಧಿವಂತರೆಂದುಕೊಂಡಿರುವುದರಿಂದಲೇ ಪ್ರಪಂಚದಲ್ಲಿ ಇಷ್ಟು ಮಂದಿ ಮೂರ್ಖರಿರುವುದು.

Ø ನಾಚಿಕೆ ಅನ್ನುವುದನ್ನು ಬಿಟ್ಟಾಗ ಮಾನವ ಮೃಗನಾಗುತ್ತಾನೆ
Ø ನಿಮ್ಮ ನಿನ್ನೆಯ ದಿನ ಇಂದಿನ ದಿನವನ್ನು ನುಂಗದಂತೆ ನೋಡಿಕೊಳ್ಳಿ.
Ø ನಗಲು ಬರುವವನು ಮಾತ್ರ ಇತರರನ್ನೂ ನಗಿಸಬಲ್ಲ.
Ø ನಾವು ನಮ್ಮನ್ನೇ ಅಲಕ್ಷಿಸದಿರುವುದು ನಮ್ಮ ಮೊದಲ ಕರ್ತವ್ಯ.
Ø ನಿರಾಸೆ ಮರಣದ ಮತ್ತೊಂದು ಹೆಸರು.
Ø ನಕ್ಕು ನಗಿಸುವಾ ನಗುಲೇಸು.
Ø "ನಡೆದುಬಂದ ದಾರಿ ಕಡೆಗೆ ಹೊರಳಿಸಬೇಡ ಕಣ್ಣನು"
Ø ನೋವೆಲ್ಲಾ ಜೀವಕ್ಕೆ ಪುಟವಿಡುವ ಪಾಕ.
Ø ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ .
Ø ಜಗತ್ತಿನ ಅತಿದೊಡ್ಡ ಪ್ರಾರ್ಥನೆಯೆಂದರೆ ತಾಳ್ಮೆ.
Ø ಜಗತ್ತಿನಲ್ಲಿ ರೆಕ್ಕೆಗಳುಳ್ಳ ಎರಡನೆಯ ಸುಂದರ ವಸ್ತುವೆಂದರೆ ಪತಂಗ; ಮೊದಲನೆಯದು ಹಣ.
Ø ತಾಳ್ಮೆಯಿಂದ ಕಾಯುವುದೇ ಯಶಸ್ಸಿನ ಗುಟ್ಟು.
Ø ತಮ್ಮನ್ನು ಸರಿಪಡಿಸಿಕೊಂಡವರು ಪ್ರಪಂಚವನ್ನು ಸರಿಪಡಿಸಿದವರಾಗುತ್ತಾರೆ.
Ø ತನಗೆ ತಾನೇ ಕಟ್ಟುಪಾಡನ್ನು ವಿಧಿಸಿಕೊಳ್ಳುವವನೇ ಸ್ವತಂತ್ರನಾದ ವ್ಯಕ್ತಿ.
Ø ತಾಯಿ ಇಲ್ಲದ ತವರಿಗೆ ಮಗಳು ಬಂದರೆ ಉರಿಬೇಸಗೆಯಲ್ಲಿ ಮರಳು ಗಾಡಿಗೆ ಬಂದಂತೆ.
Ø ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತ ಮಿಗಿಲು.
Ø ದುಡಿಮೆ ಮುನ್ನಡೆಗೆ ಕೀಲಿ.
Ø ದೇವರು ಒಬ್ಬನೇ. ಅವನನ್ನು ಭಾವಿಸುವ ಮನಸ್ಸುಗಳು ಮಾತ್ರ ಅನೇಕ.
Ø ದುಡ್ಡು ಎಂದರೆ ದುಡಿದು ತರಬೇಕಾದ ವಸ್ತು.
Ø ಕಾಲ ಎನ್ನುವುದು ನಿಂತ ನೀರಲ್ಲ ಹರಿಯುತ್ತಿರುವ ಪ್ರವಾಹ.
Ø ಕಳೆದುಹೋದ ಸುಖವನ್ನು ನೆನಪಿಸಿಕೊಳ್ಳುವುದೇ ದುಃಖಗಳಲ್ಲಿ ದುಃಖ.
Ø ಕಣ್ಣುಗಳ ಬದಲಾಗಿ ಹೃದಯದಿಂದ ನೋಡುವುದೇ ತಾಳ್ಮೆ.
Ø ಕಾವ್ಯೋಪಾಸನೆಯು ಉತ್ತಮ ಆತ್ಮ ಸಂಸ್ಕಾರ.
Ø ಕೀರ್ತಿ ಬಂದಾಗ ನೆನಪಿನ ಶಕ್ತಿ ಅಳಿಯುತ್ತದೆ.
Ø ಕ್ರೂರ ಹುಲಿಗಿಂತ ಕ್ರೂರವಾದುದೆಂದರೆ ಜನರನ್ನು ಹಿಂಸಿಸುವ ಸರಕಾರ.
Ø ಕೆಟ್ಟ ಮಾತಿನೊಡನೆ ಗೆಳೆತನವು ಕೊನೆಗೊಳ್ಳುತ್ತದೆ.
Ø ಕಾಲವನ್ನು ನಾವು ಪಾಲಿಸಿದರೆ ಅದು ನಮಗೆ ವಿಧೇಯವಾಗಿರುತ್ತದೆ.
Ø ಚೆನ್ನಾಗಿ ಮುಚ್ಚಿಟ್ಟ ಪುಸ್ತಕ ಕೇವಲ ಒಂದು ಕಾಗದದ ಕಂತೆ.
Ø ಅಹಿಂಸೆ ಇಲ್ಲದೆ ಸತ್ಯ ಸಾಕ್ಷಾತ್ಕಾರ ಸಾಧ್ಯವಿಲ್ಲ.
Ø ಅನ್ನವನು ಇಕ್ಕುವ ಅನ್ಯಜಾತನೆ ಕುಲಜ
Ø ಅರಮನೆಯನ್ನು ಏರಿದರೂ ಕಾಗೆ ಗರುಡ ಪಕ್ಷಿಯಾದೀತೇ?
Ø ಆಡದೆ ಮಾಡುವವನು ರೂಢಿಯೊಳುತ್ತಮನು.
Ø ಇರಬೇಕು ಇರಬೇಕು ಸಂಸಾರದಿ ಜನಕಾದಿ ರಾಜ ಋಷಿಗಳಂತೆ.
Ø ಇಂದ್ರಿಯಗಳ ದಾಸನು ದುಃಖಗಳ ದಾಸನೂ ಆಗುತ್ತಾನೆ.
Ø “ಆಕಳಿಕೆ” ಎಂದರೆ ಮೌನವಾಗಿ ಹಾಕುವ ಬೊಬ್ಬೆ.
Ø ಆಸೆಗೆ ದಾಸರಾದವರು ಇಡೀ ಜಗತ್ತಿಗೂ ದಾಸರೇ.
Ø ಉತ್ಸಾಹವನ್ನು ಕಳೆದುಕೊಂಡ ಮನಸ್ಸು ತೂತುಬಿದ್ದ ಬಲೂನಿನಂತೆ.
Ø ಕೊಂಬಿಲ್ಲದ ದನಗಳು ಗ್ರಾಮಗಳಲ್ಲಿ ಇರುತ್ತವೆ. ಮೆದುಳಿಲ್ಲದ ಜನಗಳು ಪಟ್ಟಣಗಳಲ್ಲಿರುತ್ತಾರೆ.
Ø ಕಷ್ಟವೂ ಬಡತನವೂ, ಬೋಧಿಸುವಂತೆ ಬೇರೆ ಯಾವುದೂ ಬೋಧಿಸಲಾರದು.
Ø ವಿನಾಶಕಾಲೇ ವಿಪರೀತ ಸಿಧ್ಧಿ!
Ø ಸರಳತೆಯು ನಿಸರ್ಗದ ಮೊದಲ ಹೆಜ್ಜೆ ಮತ್ತು ಕಲೆಯ ಕೊನೆಯ ಹೆಜ್ಜೆ.
Ø ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ.
Ø ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ
Ø ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.
Ø
“ಎಂಥ ನಾಡಿದು ಯೆಂಥ ಕಾಡಾಯಿತೋ"
Ø ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.
Ø ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ.
Ø
ಪ್ರೀತಿ ಮತ್ತು ಸ್ನೇಹ ಒಂದು ನಾಣ್ಯದ ಎರಡು ಮುಖಗಳು.
Ø ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ.
Ø ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!
Ø
ದುರ್ಬಲರಿಗೆ ಕ್ಷಮಿಸುವ ಹಕ್ಕಿಲ್ಲ, ಕ್ಷಮಿಸುವ ಶಕ್ತಿ ಮತ್ತು ಹಕ್ಕಿರುವುದು ಬಲಿಷ್ಠರಿಗೆ ಮಾತ್ರ.
Ø
ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.
Ø ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ
Ø ಮಾಡುವುದರಿಂದಲೇ ಏನಾದರೂ ಆಗುತ್ತದೆ. ಆದುದರಿಂದ ಕರ್ಮ ಮಾಡಲೇಬೇಕು. ಪ್ರಯತ್ನವನ್ನೇ ಪರಮೇಶ್ವರನೆಂದು ತಿಳಿಯಬೇಕು.
Ø ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.
Ø ಬೇರೆಯವರಿಗೆ ಕೆಡುಕನ್ನು ಬಯಸದಿರುವುದೇ ನ್ಯಾಯ.
Ø ಕಹಿ ನೆನಪು ಹಾಗೂ ನೋವುಗಳು ಮಾಯವಾಗದೇ ನಮ್ಮನ್ನು ಸದಾ ಕಾಡುತ್ತಿರುತ್ತವೆ
Ø
ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ
Ø ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.
Ø ವಿದ್ಯಾರ್ಥಿ ಭತ್ತ ಬೆಳೆಯುವ ಗದ್ದೆಗಳಾಗಬೇಕು, ಬರಿಯ ಚೀಲಗಳಾಗಬಾರದು
Ø ಮಾತು ಮನಸ್ಸುಗಳನ್ನು ಒಂದುಗೂಡಿಸಬೇಕೆ ಹೊರತು ಒಡೆಯಬಾರದು
Ø ನಿನ್ನ ಹೃದಯದಲ್ಲಿ ಜ್ಞಾನ ದೀಪವೊಂದನ್ನು ಹೊತ್ತಿಸು ಎಂದೆಂದಿಗೂ ಆರಲಾರದು
Ø ಆಳುವಾಗ ಒಂಟಿಯಾಗಿ ಆಳು, ನಗುವಾಗ ಎಲ್ಲರೊಡನೆ ನಗು.
Ø ಹೃದಯ ದೃಡವಾಗಿದ್ದರೆ ಸಂತೆಯಲ್ಲಿ ಕೂಡ ಆನೆಯನ್ನು ಎದುರಿಸಬಲ್ಲದು.
Ø ಹೃದಯ ಸತ್ಯವನ್ನೇ ಶೋಧಿಸಿ ತೆಗೆಯಬಲ್ಲ ಮಹಾನ್ ಭವಿಷ್ಯವಾದಿಯಾಗಿದೆ .
Ø ಉತ್ತಮ ಹೃದಯದವನಿಗೆ ಮುಖ ಕಂಡೊಡನೆಯೇ ಹೃದಯದ ಗೋಚರವಾಗುತ್ತದೆ.
Ø ಇವತ್ತಿನ ಹಾರೈಕೆ, ನಾಳಿನ ಪೂರೈಕೆ, ಇಂದಿನ ಕನಸು, ನಾಳೆಯ ನನಸು
Ø ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.
Ø ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.
Ø ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.
Ø ಬಾಗಿಲನ್ನು ತಟ್ಟದ ಎಷ್ಟೋ ಜನ ತಮ್ಮ ಅವಕಾಶಗಳನ್ನು ಕಳೆದುಕೊಂಡಿದ್ದಾರೆ.
Ø ಹೆಂಡತಿ ಒಂದು ಕನ್ನಡಿ ಇದ್ದಂತೆ ,ಅದರಲ್ಲಿ ಕಾಣುವ ಪ್ರತಿಬಿಂಬವೇ ಪತಿ.
Ø ಮನುಷ್ಯನ ಉತ್ತಮ ಅಭ್ಯಾಸವೆಂದರೆ ತಮ್ಮ ಅತ್ಮಸಾಕ್ಷಿಯೊಡನೆ ಪ್ರಾಮಾಣಿಕತೆ.
Ø ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ.
Ø ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...
Ø ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.
Ø ಯಾವುದು ಕಾಲದ ಕಠಿಣ ಪರೀಕ್ಷೆಯಲ್ಲೂ ಅಚಲವಾಗಿರುತ್ತದೆಯೋ ಅದೇ ಸತ್ಯ.
Ø ಕರುಣೆಯೇ ಪರಮ ಜ್ಞಾನ.
Ø ಯಾವುದು ಕಾಲದ ಕಠಿಣ ಪರೀಕ್ಷೆಯಲ್ಲೂ ಅಚಲವಾಗಿರುತ್ತದೆಯೋ ಅದೇ ಸತ್ಯ.
Ø ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು.
Ø ಭಾರತೀಯರಲ್ಲಿ ದೊಡ್ಡದೊಂದು ದೋಷವಿದೆ.ನಾವು ಒಂದು ಸ್ಥಿರವಾದ ಸಂಸ್ಥೆಯನ್ನು ಕಟ್ಟಲಾರೆವು. ಕಾರಣವೇನೆಂದರೆ ಅಧಿಕಾರವನ್ನು ಇತರರೊಂದಿಗೆ ಹಂಚಿಕೊಳ್ಳುವುದು ನಮಗೆ ಇಷ್ಟವಿಲ್ಲ. ನಾವು ಕಾಲವಾದ ಮೇಲೆ ಇದರ ಗತಿ ಏನೆಂಬುದನ್ನು ಕುರಿತು ಚಿಂತಿಸುವುದೇ ಇಲ್ಲ.
Ø ಶಿಕ್ಷಣವೆಂದರೆ ಮೊದಲೇ ಮನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು ಪ್ರಕಾಶಪಡಿಸುವುದು.
Ø ನೀವು ಯಾವುದೇ ಕೆಲಸವನ್ನು ಮಾಡುವಾಗಲೂ ನಿಮ್ಮ ಮನಸ್ಸು ಹೃದಯ, ನಿಮ್ಮ ಸರ್ವಸ್ವವನ್ನೂ ಆಕೆಲಸಕ್ಕೆ ಕೊಡಿ. ನಾನೊಮ್ಮೆ ಒಬ್ಬ ಸಾಧು ಮಹಾತ್ಮನನ್ನು ನೋಡಿದ್ದೆ. ಆತ ಪೂಜೆ, ಧ್ಯಾನಗಳನ್ನು ಎಷ್ಟು ಏಕಾಗ್ರತೆ ಶ್ರದ್ಧೆಗಳಿಂದ ಮಾಡುತ್ತಿದ್ದನೋ ಅಷ್ಟೇ ಸಾವಧಾನದಿಂದ ತನ್ನ ಆಡುಗೆ ಮಾಡುವ ಹಿತ್ತಾಳೆ ಪಾತ್ರೆಗಳನ್ನು ಫಳ ಫಳನೆಹೊಳೆಯುವ ಚಿನ್ನದಂತೆ ತೊಳೆದಿಡುತ್ತಿದ್ದನು.
Ø ನಿಮ್ಮ ಪ್ರೀತಿಯನ್ನು ಮೆಚ್ಚುಗೆಯನ್ನು ನಿಮ್ಮವರಿಗೆ ಇಂದೇ ಹೇಳಿ. ನಾಳೆಗೆ ಈ ಅವಕಾಶ ಸಿಗದೇ ಇರಬಹುದು.
Ø ಹೊಟ್ಟೆಗೆ ಕಿವಿ ಇಲ್ಲವಾದ್ದರಿಂದ ಹಸಿದವನ ಮುಂದೆ ಭಾಷಣ ಮಾಡುವುದು ವ್ಯರ್ಥ.
Ø ಎಷ್ಟೋ ಬಾರಿ ಗೆಲವು ಸೋಲಿನ ರೂಪದಲ್ಲಿ ಬರುತ್ತದೆ....
Ø ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.
Ø ಪ್ರೀತಿ ಮತ್ತು ಗಾಜುಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ... ಒಮ್ಮೆ ಒಡೆದರೆ ಮತ್ತೆ ಜೋಡಿಸಲು ಕಷ್ಟ...
Ø ಮಾನವರು ಯುಧ್ಧಕ್ಕೆ ಅಂತ್ಯವನ್ನು ತರಬೇಕು, ಇಲ್ಲದಿದ್ದರೆ ಯುಧ್ಧ ಎಲ್ಲರಿಗೂ ಅಂತ್ಯವನ್ನು ತರುತ್ತದೆ.
Ø ಲೆಕ್ಕಕ್ಕೇ ಇಲ್ಲದಿರುವುದಕ್ಕಿಂತ ಟೀಕೆಗೆ ಗುರಿಯಾಗುವುದು ಲೇಸು.
Ø ಮಾಡಲು ಕೈಲಾದವನು ಮಾಡುತ್ತಾನೆ. ಮಾಡಲಾಗದವನು ಉಪದೇಶ ಮಾಡುತ್ತಾನೆ.
Ø ಆತ್ಮವಿಶ್ವಾಸ ಕಡಿಮೆಯಾಗುತ್ತಾ ಹೋದಂತೆ ಮುಖವಾಡಗಳ ಅಗತ್ಯ ಹೆಚ್ಚುತ್ತಾ ಹೋಗುತ್ತದೆ.
Ø ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.
Ø ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.
Ø
"ಪ್ರತಿಫಲದ ಅಪೇಕ್ಷೆಯಿಲ್ಲದೆ ಮಾಡಿದ ಸಹಾಯ ಎಂದಿಗೂ ದೊಡ್ಡದು."
Ø
Ø
"ಜೀವನದಲ್ಲಿ ಎಂದೂ ಯಾರಿಂದಲೂ ಸಹಾಯದ ಅಪೇಕ್ಷೆಯನ್ನ ಇಡಬಾರದು. ಯಾಕೆಂದರೆ ನಾವು ಕಷ್ಟದಲ್ಲಿ ಇದ್ದಾಗ ಯಾರಾದರೂ ಸಹಾಯ ಮಾಡದಿದ್ದರೆ ಅದಕ್ಕಿಂತ ದೊಡ್ಡ ಯಾತನೆ ಬೇರೊಂದಿಲ್ಲ."
Ø
"ಮನುಷ್ಯನಿಗೆ ಯಾವಾಗ ಒಂದು ವಸ್ತು ಸುಲಭವಾಗಿ ಸಿಗುವ ಹಾಗೆ ಇರುತ್ತೋ ಆಗ ಅದರ ಬೆಲೆ ಗೊತ್ತಿರುವುದಿಲ್ಲ,
ಆದರೆ ಯಾವಾಗ ಆ ವಸ್ತುವಿನ ಬೆಲೆ ತಿಳಿಯುತ್ತದೋ ಆಗ ಅದು ಸುಲಭವಾಗಿ ಸಿಗುವುದಿಲ್ಲ."
Ø
ವಿದ್ಯೆ ಗುರುಗಳ ಗುರು
Ø
ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ
Ø
ಶಿಕ್ಷಣವೆಂದರೆ, ಮನಸ್ಸು, ದೇಹ, ಬುದ್ಧಿಗಳೊಂದಿಗೆ ದೊರೆಯುವ ಸಂಸ್ಕಾರ
Ø
ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ
Ø
ವಿದ್ಯಾಭ್ಯಾಸದಿಂದ ಪ್ರಭುತ್ವ ಬೆಳೆಯದು
Ø
ಶಿಕ್ಷಣಕ್ಕಿಂತಲೂ ಮನುಷ್ಯರಿಗೆ ಶೀಲ ಚರಿತ್ರೆಗಳು ಹೆಚ್ಚು ಅವಶ್ಯಕ
Ø
ಮನುಷ್ಯನು ಕಲಿಯಲು ಬಯಸುವುದಾದರೆ ಅವನ ಪ್ರತಿಯೊಂದು ತಪ್ಪು ಅವನಿಗೆ ಶಿಕ್ಷಣ ಕೊಡುತ್ತದೆ
Ø
ಅಭಿರುಚಿಯನ್ನು ಹುಟ್ಟಿಸುವುದು ಶಿಕ್ಷಣದ ಉದ್ದೇಶವೇ ಹೊರತು, ಒಬ್ಬರು ಕಲಿತದ್ದನ್ನು ಮತ್ತೊಬ್ಬರಿಗೆ ಹೇಳುವುದಲ್ಲ
Ø
ಶಾಲಾ-ಕಾಲೇಜುಗಳಲ್ಲಿ ಕಲಿತದ್ದು ನಿಜವಾದ ಶಿಕ್ಷಣವಲ್ಲ. ಅದು ಶಿಕ್ಷಣಕ್ಕೆ ಸಾಧನವಷ್ಟೆ
Ø
ಮನುಷ್ಯರಲ್ಲಿ ಪ್ರೇಮವನ್ನು ಮೂಡಿಸುವ ಸರಳ ಜೀವನನ್ನು ಕಲಿಸುವ ವಿದ್ಯೆಯೇ ಶ್ರೇಷ್ಠವಾದದ್ದು
Ø
ಮನುಷ್ಯನಿಗೆ ಯಾವುದು ಗೊತ್ತಿಲ್ಲವೋ ಅದನ್ನು ತಿಳಿಸುವುದು ವಿದ್ಯಾಭ್ಯಾಸದ ಗುರಿಯಲ್ಲ. ಹೇಗೆ ವರ್ತಿಸಬೇಕೆಂದು ತಿಳಿಸುವುದೇ ವಿದ್ಯಾಭ್ಯಾಸದ ಗುರಿ
Ø
ಪ್ರತಿಯೊಬ್ಬ ವ್ಯಕ್ತಿಯು ಎರಡು ರೀತಿಯ ಶಿಕ್ಷಣ ಹೊಂದುತ್ತಾನೆ. ಒಂದು ಇತರರು ಅವನಿಗೆ ನೀಡುವುದು. ಇನ್ನೊಂದು ಸ್ವಂತ ಅವನು ಕಲಿಯುವುದು
Ø
ವಿದ್ಯೆಯೊಂದಿಗೆ ಆದರ್ಶ ಗುಣಗಳು ನಿನ್ನಲ್ಲಿ ಬರದಿದರೆ ನೀನು ಓದಿದ್ದು ವ್ಯರ್ಥ
Ø
ಮನೆಯೇ ಮೊದಲ ಪಾಠಶಾಲೆ
Ø
ವಿದ್ಯಾಭ್ಯಾಸ ಯಾವ ದಿಕ್ಕಿನಲ್ಲಿ ಮನುಷ್ಯನನ್ನು ನಡೆಸುವುದೋ ಅದೇ ಅವನ ಭವಿಷ್ಯವನ್ನು ನಿರ್ಧರಿಸುವುದು
Ø
ಶಿಕ್ಷಣದ ಮುಖ್ಯ ಕೆಲಸವೆಂದರೆ ನಮ್ಮ ಬದುಕನ್ನು ಅರ್ಥಪೂರ್ಣವಾಗುವಂತೆ ಸಹಕರಿಸುವುದು
Ø
ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ.
Ø
ತಪ್ಪನ್ನು ಮಾಡುವ ಮೊದಲೇ ಆಕ್ಷೇಪಿಸುವುದು ಹಾಗೂ ಒಳ್ಳೆಯದನ್ನು ಮಾಡುವ ಮೊದಲೇ ಹೊಗಳುವುದು ಮಾನವನ ಸಹಜ ಗುಣ!
Ø
ಉತ್ತಮ ಗುಣವೆ೦ಬುದು ನೀರಿನ೦ತೆ! ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತದೆ… ಕೆಳ ಮಟ್ಟದಲ್ಲಿಯೇ ನಿಲ್ಲುತ್ತದೆ!
Ø
ತನ್ನನ್ನು ತಾನೇ ಹೊಗಳಿಕೊಳ್ಳುವವನು ಮಹಾ ಮೂರ್ಖನು!
Ø
ಒಳ್ಳೆಯ ನೆಲದಲ್ಲಿ ಬಿತ್ತಿದ ಬೀಜ, ಒಳ್ಳೆಯ ಮಗನಲ್ಲಿ ಇಟ್ಟಿದ್ದು ಹಾಗೂ ಕೊಟ್ಟಿದ್ದು ಎ೦ದೂ ಹಾಳಾಗುವುದಿಲ್ಲ
Ø
ಯುಧ್ಧದ ಚರಿತ್ರೆಯನ್ನು ಓದುವುದರಲ್ಲಿ ಇರುವಷ್ಟು ಆಸಕ್ತಿ ಶಾ೦ತಿಯ ಇತಿಹಾಸವನ್ನು ಓದುವುದರಲ್ಲಿ ಇರುವುದಿಲ್ಲ!
Ø
ನಾಚಿಕೆ ಮತ್ತು ಭಯವಿಲ್ಲದೆ ಮನುಷ್ಯನ ಅ೦ತರ೦ಗದಲ್ಲಿ ಕೆಟ್ಟ, ಒಳ್ಳೆಯ, ಸ೦ತೋಷದ ಹಾಗೂ ದು:ಖದ ಎಲ್ಲಾ ರೀತಿಯ ಯೋಚನೆಗಳೂ ಬರುತ್ತವೆ!
Ø
ಯಾವುಧೇ ಧನ ರಾಶಿಯೂ ಸ೦ತೋಷ ಎ೦ಬ ಧನರಾಶಿಯ ಮು೦ದೆ ಧೂಳಿನ ಸ್ಥಾನ
Ø
ಎಲ್ಲವನ್ನೂ ಧೇವರೇ ನೋಡಿಕೊಳ್ಳುತ್ತಾನೆ೦ದು ಸುಮ್ಮನೇ ಕುಳಿತುಕೊಳ್ಳುವುದು ಮಹಾ ಮೂರ್ಖತನ!
No comments:
Post a Comment