Saturday, March 30, 2013



ಕನ್ನಡ ಗಾದೆಗಳು / KANNADA GADEGALU

ಕುಂಬಾರನ ಮಗಳು ಲಾಭ ಬಂದ ಹೊರತು ಮಡಿಕೆ ಒಡೆಯುವುದಿಲ್ಲ.
ಕಾಗೆಗೆ ಯಜಮಾನನ ಸ್ಥಾನ ಕೊಟ್ಟರೆ ಮನೆ ತುಂಬಾ ಪಿಷ್ಟ.
ಇತರರ ಕಣ್ಣಿನ ಕಸ ಕಾಣುವುದುತನ್ನ ಕಣ್ಣಿನ ಕಸ ಕಾಣುವುದಿಲ್ಲ.
ತನ್ನ ಮೊಸರನ್ನು ಯಾರೂ ಹುಳಿ ಅನ್ನುವುದಿಲ್ಲ.
ನಾನು ಅಗೆಯುವಲ್ಲಿ ಕಲ್ಲುಅಜ್ಜ ಅಗೆಯುವಲ್ಲಿ ಮಣ್ಣು.
ದಡ್ಡ ಮನುಷ್ಯ ನೆಲಕ್ಕೆ ಭಾರಅನ್ನಕ್ಕೆ ಖಾರ.
ದಡ್ಡನಿಗೆ ಹಗಲು ಕಳೆಯುವುದಿಲ್ಲಒಳ್ಳೆಯವನಿಗೆ ರಾತ್ರಿ ಸಾಲುವುದಿಲ್ಲ.
ಹುಲಿಯ ಬಣ್ಣವನ್ನು ಮೆಚ್ಚಿನರಿ ತನ್ನ ಕೂದಲನ್ನು ಭಸ್ಮ ಮಾಡಿಕೊಂಡಂತೆ.
ಬಾಯಲೆಲ್ಲಾ ವೇದಾಂತಮಾಡುವುದೆಲ್ಲಾ ರಾದ್ಧಾಂತ.
೧೦ತಿನ್ನಲುಉಣ್ಣಲು ಇದ್ದರೆ ಯಾವತ್ತೂ ನೆಂಟರು.
೧೧ಶರೀರಕ್ಕೆ ಸುಖಹೊಟ್ಟೆಗೆ ದುಃಖ.
೧೨ನೂರಾರು ರೋಗಿಗಳನ್ನು ಕೊಂದು ಒಬ್ಬ ವೈದ್ಯ ಆದಂತೆ !
೧೩ವಿವಿಧ ರೋಗಗಳಿಗೆ ಮದ್ದಿವೆಹೊಟ್ಟೆ ಉರಿಗೆ ಮದ್ದಿಲ್ಲ.
೧೪ಅಡಿಕೆಕಾಯಿಯನ್ನು ಚೀಲದೊಳಗೆ ಹಾಕಬಹುದುಮರ ಆದ ನಂತರ ಹಾಕಬಹುದೇ?
೧೫ಲಾಭ ನೋಡಿ ಬಾಳೆ ಹಣ್ಣು ತಿಂದಂತೆ.
೧೬ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.
೧೭ಹತ್ತು ಮಕ್ಕಳ ತಾಯಿ ದಾರಿಯಲ್ಲಿ ಸಿಕ್ಕಿದ್ದನ್ನು ತಿಂದಂತೆ.
೧೮ತಾಯಿಯನ್ನು ಹೊಡೆಯಬಾರದುಗುಬ್ಬಿಯ ಗೂಡನ್ನು ತೆಗೆಯಬಾರದು.
೧೯ನಾಯಿಯು ನಮ್ಮನ್ನು ಕಚ್ಚಿದರೆ ನಾಯಿಯನ್ನು ಕಚ್ಚಲು ನಮ್ಮಿಂದ ಆಗುವುದೇ?
೨೦ಬೆಲ್ಲ ಇದ್ದಲ್ಲಿ ನೊಣ ತಿರುಗಾಡಿದಂತೆ.
೨೧ಹುಣಸೆ ಹುಳಿಯೆಂದು ಅಂಬಡೆ ತಿಂದ ಹಾಗೆ.
೨೨ಮೃತ್ಯು ಬಂದ ಮೇಲೆ ವೈದ್ಯ ಬಂದ.
೨೩ಶಸ್ತ್ರದಿಂದಾದ ಗಾಯ ಮಾಯುತ್ತದೆನಾಲಿಗೆಯಿಂದಾದ ಗಾಯ ಮಾಯುವುದಿಲ್ಲ.
೨೪ಚರ್ಮ ಹೋದರೂ ಪರವಾಗಿಲ್ಲಕಾಸು ಹೋಗಬಾರದು ಎಂದಂತೆ.
೨೫ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಹೇಳಿದ ಹಾಗೆ.
೨೬ರಾವಣನ ಮಾತಿಗೆ ಮನಸೋತವರಾಮನ ಮಾತಿಗೆ ಜಾಣನಾಗುವನೇ?
೨೭ಮನೆಯೆಂಬ ಮರ ಮುರಿಯಬಾರದುಮನಸ್ಸೆಂಬ ಮಾರ್ಗ ಕತ್ತರಿಸಬಾರದು.
೨೮ದುಷ್ಟರ ಸಂಗದಿ ನೆರಳು ಕೊಯ್ಯದೆ ಬಿಡದು ಕೊರಳು.
೨೯ನೀನಾಗದೆ ರಣಹೇಡಿಕೀರ್ತಿ ಪಡೆ ಪ್ರಾಣ ನೀಡಿ.
೩೦ನಿನ್ನಲ್ಲಿ ನೀ ಹುಡುಕುಅರಿಷಡ್ವರ್ಗಗಳ ಹೊರ ಹಾಕು.
೩೧ಸಜ್ಜನರ ಮಾತು ಸಿಹಿದುರ್ಜನರ ತುತ್ತು ಕಹಿ.
೩೨ಬುದ್ಧಿ ಇದ್ದವನಲ್ಲಿ ಶ್ರದ್ಧೆನಿದ್ದೆ ಬಾರದವನಲ್ಲಿ ವಿದ್ಯೆ.
೩೩ಉಗಮವಾಗದಿರಲಿ ಹಿಂಸೆಹೆಚ್ಚಿಗೆಯಾಗದಿರಲಿ ಆಸೆ.
೩೪ನಾಳೆ ಎಂದವನಿಗೆ ಹಾಳುಇಂದೇ ಎಂದವನಿಗೆ ಬೀಳಾಗದು ಬಾಳು.
೩೫ಆಳಾಗದವ ಅರಸನಲ್ಲಹಟ ಹಿಡಿದವ ಸಾಮ್ರಾಟನಲ್ಲ.
೩೬ಉಂಡಿದ್ದು ಹೊಟ್ಟೆಗಾಗಿಮಾಡಿದ್ದು ಬಟ್ಟೆಗಾಗಿ.
೩೭ವಿಶ್ವಾಸಿ ನೀನಾಗುಘಾತುಕಕ್ಕೆ ಬಗ್ಗದೆ ಮುನ್ನುಗ್ಗು.
೩೮ಹೆಂಡತಿಯ ಮಾತು ಆಗದಿರಲಿ ಕೊಯ್ದುಕೊಳ್ಳುವಂತೆ ಕತ್ತು.
೩೯ಕಣ್ಣಿಗೆ ಕಂಡದ್ದೆಲ್ಲಾ ನುಣ್ಣಗಿರುವುದಿಲ್ಲ.
೪೦ನಿನ್ನದಲ್ಲ ಸರ್ವ ಆಸ್ತಿಒಳ್ಳೆಯದಲ್ಲ ಗರ್ವ ಜಾಸ್ತಿ.
೪೧ಮನಸ್ಸು ಇಲ್ಲದಿದ್ದರೆ ಗಟ್ಟಿಎಲ್ಲವೂ ಮೂರಾಬಟ್ಟಿ.
೪೨ಮಾಡಿ ಉಣ್ಣು ಬೇಡಿದಷ್ಟುತಗಾದೆ ಮಾಡದೇ ಉಣ್ಣು ನೀಡಿದಷ್ಟು.
೪೩ಒಣ ಮಾತು ಒಣಗಿದ ಹುಲ್ಲುಒಳ್ಳೆಯ ಮಾತು ಬೆಳ್ಳಗಿನ ಹಾಲು.
೪೪ತತ್ವದಲ್ಲಿ ಸತ್ವ ಹುಡುಕುವ್ಯಥೆಯಲ್ಲಿ ಕಥೆ ಹುಡುಕು.
೪೫ಇಲಿ ಸಿಕ್ಕರೆ ಬೆಕ್ಕು ಆಗುವುದು ಹುಲಿ.
೪೬ಕಾಗೆಯ ಕೈಯಲ್ಲಿ ಕೊಟ್ಟರೆ ಕಾರಭಾರಅದು ಮಾಡುವುದೇ ಉಪಕಾರ?
೪೭ಹೋಗುವುದು ಮೂಡಿದ ಹೊತ್ತುಹೋಗೋದಿಲ್ಲ ಆಡಿದ ಮಾತು.
೪೮ದೈವ ಕಾಡುವುದು ವಿಧಿಗಾಗಿನೀರು ಸಮುದ್ರ ಸೇರುವುದು ನದಿಗಾಗಿ.
೪೯ಬಡವರ ಕಣ್ಣೀರಿಗೆ ಕರುಣೆ ಬಂದೀತೆ ಬೆಣ್ಣೆಗೆ?
೫೦ಸಲುಗೆ ಕೊಟ್ಟರೆ ಸಾಕೂ ಹೆಗ್ಗಣವೂ ಸಹ ಏರುವುದು ಹೆಗಲಿಗೆ.
೫೧ಹುಟ್ಟಿದ ಮಗು ತರುವುದು ತೊಟ್ಟಲಿಗೆ ನಗು.
೫೨ಸ್ವಾರ್ಥ ಉಳಿಸಿದವ ಪಾಪಾತ್ಮನಿಸ್ವಾರ್ಥ ಗಳಿಸಿದವ ಪುಣ್ಯಾತ್ಮ.
೫೩ಬೇಸರವಿರಬಾರದುಅವಸರ ಮಾಡಬಾರದು.
೫೪ಎಚ್ಚರ ತಪ್ಪಿ ಮಾತನಾಡಬಾರದುಹುಚ್ಚನಂತೆ ವರ್ತಿಸಬಾರದು.
೫೫ಬಿಡುಕು ಮಾತಿಗೆ ಮಾಡಿಕೊಳ್ಳದಿರು ಕೆಡುಕು.
೫೬ಹಾಲಿಗೆ ಹುಳಿ ಹಿಂಡಿದರೆ ಮೊಸರುಮಣ್ಣಿಗೆ ನೀರು ಹಾಕಿದರೆ ಕೆಸರು.
೫೭ಗದ್ದೆ ಸುಟ್ಟರೂ ಹಾಳಾಗದು ಗಾದೆ.
೫೮ನಿನ್ನಲ್ಲಿರುವ ಮಾನ ನಿನಗೆ ಕೊಡುವುದು ಬಹುಮಾನ.
೫೯ಮಾಟ ಮಾಡಿದೋನ ಮನೆ ಹಾಳು.
೬೦ಒಬ್ಬರ ಕೂಳು ಇನ್ನೊಬ್ಬರ ಕುತ್ತು.
೬೧ಒಳಿತಾಗಿ ಮುಗಿದಿದ್ದೆಲ್ಲವೂ ಒಳ್ಳೆಯದೇ.
೬೨ಹೊಳೆಯುವುದೆಲ್ಲಾ ಚಿನ್ನವಲ್ಲ.
೬೩ಓಡಿದವನಿಗೆ ಓಣಿ ಕಾಣಲಿಲ್ಲಹಾಡಿದವನಿಗೆ ಹಾದಿ ಕಾಣಲಿಲ್ಲ.
೬೪ಬರಿಗೈಯವರ ಬಡಿವಾರ ಬಹಳ.
೬೫ಎಲ್ಲ ಕೆಡುಕಿಗೂ ಮೂಲ ಹೊಟ್ಟೆಕಿಚ್ಚು.
೬೬ಸ್ವರ್ಗದಲ್ಲಿ ಸೇವೆಗೈಯುವುದಕ್ಕಿಂತ ನರಕದಲ್ಲಿ ಆಳುವುದೇ ಲೇಸು.
೬೭ಅರೆಗೊಡದ ಅಬ್ಬರವೇ ಬಹಳ.
೬೮ಮರಿ ಮಾಡುವ ಮೊದಲೇ ಮೊಟ್ಟೆಗಳನ್ನು ಎಣಿಸಬೇಡ.
೬೯ಆಪತ್ತಿಗಾದವನೇ ನಿಜವಾದ ಗೆಳೆಯ.
೭೦ಇಂದಿನ ಸೋಲು ನಾಳಿನ ಗೆಲುವು.
೭೧ಧೈರ್ಯವಿದ್ದವನಿಗೆ ದೈವವೂ ಅನುಕೂಲ.
೭೨ದುಡ್ಡಿಗಿಂತ ದೊಡ್ಡ ಹೆಸರೇ ಉತ್ತಮ.
೭೩ಪ್ರಯತ್ನಕ್ಕೆ ಪರಮೇಶ್ವರನೂ ಸಹಾಯ ಮಾಡುವನು.
೭೪ಉತ್ತಮವಾದ ನಗು ನೇಸರನ ಮಗು.
೭೫ಸದಾಚಾರಣೆಯ ಉದಾಹರಣೆಯೇ ಉತ್ತಮವಾದ ಉಪದೇಶ.
೭೬ಪ್ರಾಮಾಣಿಕತೆಯಿಂದಲೇ ಪಾರಮಾರ್ಥ.
೭೭ಕರೆದುಣ್ಣುವ ಕೆಚ್ಚಲನ್ನು ಕೊರೆದುಂಡ ಹಾಗೆ.
೭೮ಉದ್ದುದ್ದ ಮಾತಿನವರ ಮೊಳಕೈ ಮೊಂಡ.
೭೯ಕಿಡಿ ಸಣ್ಣದಾದರೂ ಕಾಡೆಲ್ಲವನ್ನು ಸುಡುತ್ತದೆ.
೮೦ನೋಡಿ ನಡೆದವರಿಗೆ ಕೇಡಿಲ್ಲ.
೮೧ಕೃತಿ ಇಲ್ಲದ ಮಾತು ಕಸ ಬೆಳೆದ ತೋಟವಿದ್ದಂತೆ.
೮೨ಚಿಂತೆ ಮಾಡಿದರೆ ಸಂತೆ ಸಾಗೀತೆ?
೮೩ದುಡ್ಡನ್ನು ಕಾದಿಟ್ಟುಕೊಳ್ಳದವನು ಹಣವಂತನು ಹೇಗೆ ಆದಾನು?
೮೪ಮಕ್ಕಳ ಬಾಯಿಗೆ ಹಣ್ಣು ಕೊಟ್ಟು ಮಣ್ಣು ಬಿಡಿಸು.
೮೫ತಾಯಿ ಬೇಕು ಇಲ್ಲವೇ ಬಾಯಿ ಬೇಕು.
೮೬ಸೀರಿಗೇಡಿಗೆ ಸೀರೆ ಉಡಿಸಿದರೆ ಕೆರಿ ದಂಡಿ ಮ್ಯಾಗ ನಿಂತು ಕೇಕೆ ಹಾಕಿದಳು.
೮೭ಪೀತಾಂಬರ ಉಟ್ಟರೂ ಕೊತ್ತಂಬರಿ ಮಾರೋದು ತಪ್ಪಲಿಲ್ಲ.
೮೮ಪೇಚಾಟದಲ್ಲಿ ಬಿದ್ದವನಿಗೆ ಪೀಕಲಾಟವೇ ಗತಿ.
೮೯ಹಾರುವನ ತೊತ್ತಾಗಬೇಡ ಗಾಣಿಗನ ಎತ್ತಾಗಬೇಡ.
೯೦ಮಂತ್ರಕ್ಕಿಂತ ಉಗುಳೇ ಹೆಚ್ಚು.
೯೧ಹಂಪಿಗೆ ಹೋಗುವುದಕ್ಕಿಂತ ಕೊಂಪೆಯಲ್ಲಿರುವುದೇ ಲೇಸು.
೯೨ಎಡಗಣ್ಣು ಹೊಡೆದರೆ ನಾರಿಗೆ ಶುಭ.
೯೩ಊಟವೆಂದರೆ ಊರು ಬಿಟ್ಟುಹೋದಂತೆ.
೯೪ಎಲ್ಲ ಮುಗಿದ ಮೇಲೆ ತೀರ್ಥಯಾತ್ರೆಗೆ ಹೊರಟಂತೆ.
೯೫ಒಗ್ಗಟ್ಟಿಲ್ಲದ ಊರಲ್ಲಿ ಒಪ್ಪತ್ತೂ ಇರಬೇಡ.
೯೬ಒಕ್ಕಣ್ಣ ತನಗೆ ಹತ್ತು ಕಣ್ಣು ಅಂತಿದ್ನಂತೆ.
೯೭ಕಣ್ಣಿಗೂ ಮೂಗಿಗೂ ಮೂರು ಗಾವುದ.
೯೮ಕಲಹವೇ ಕೇಡಿಗೆ ಮೂಲ.
೯೯ಮಾತಿಗೆ ಸಿಕ್ಕಿದರೆ ಮಳೆಗೆ ಸಿಕ್ಕಂತೆ.
೧೦೦ನಾಲಿಗೆಯಿಂದ ಕೆಳಗೆ ಬಿದ್ದರೆ ನರಕ.
೧೦೧ಮಾಡಿದ ರಾಗಿ ಕೊಟ್ರೂ ಮೂರ್ಖನ ಸಹವಾಸ ಬೇಡವೆಂದಂತೆ.
೧೦೨ಲೋಕ ತಿಳೀಬೇಕು ಲೆಕ್ಕ ಕಲೀಬೇಕು.
೧೦೩ಸಾಲ್ಗಾರ ಸುಮ್ಮನಿದ್ರು ಸಾಕ್ಷಿಗಾರ ಸುಮ್ಮನಿರ.
೧೦೪ಹಲ್ಲಿರುವ ತನಕ ಊಟ ಕಣ್ಣಿರುವ ತನಕ ನೋಟ.
೧೦೫ದಕ್ಷಿಣೆಗಾದರೆ ಮಾತು ಹಿಡಿದಾನುಮಂತ್ರಕ್ಕಾದರೆ ಬೆನ್ನು ತೋರ್ಸಿಯಾನು.
೧೦೬ಭಾವಿಸಿದರೆ ಬಳಗಕೂಡಿಸಿದರೆ ಕಾಸು.
೧೦೭ಭಾಷೆ ಕೊಟ್ಟವನು ಪೋಷಣೆ ಮಾಡನೇ?
೧೦೮ಭಾಷೆ ತಿಳಿಯದಿದ್ದರೂ ಹಾಸ್ಯಕ್ಕೆ ಕಡಿಮೆಯಿಲ್ಲ.
೧೦೯ಭಿಕಾರಿಯಾದವ ಕಾಶಿಗೆ ಹೋದರೂಭಿಕ್ಷಾನ್ನವಲ್ಲದೆ ಪಕ್ವಾನ್ನ ಉಂಡಾನೇ?
೧೧೦ಮಣದಷ್ಟು ಮಾತಿಗಿಂತ ಕಣದಷ್ಟು ಕೆಲಸ ಲೇಸು.
೧೧೧ಮಳೆ ನೀರನ್ನು ಬಿಟ್ಟು ಮಂಜಿನ ನೀರಿಗೆ ಕೈಯೊಡ್ಡಿದ ಹಾಗೆ.
೧೧೨ದುಡಿಯೋ ತನಕ ಮಡದಿ.
೧೧೩ದೂರವಿದ್ದ ಮಗನಿಗೂಹತ್ತಿರವಿದ್ದ ಮಗನಿಗೂ ಸರಿಬಾರದು.
೧೧೪ದೊಂಬರಾಟ ಆಡಬಹುದು ಮಕ್ಕಳಾಟ ಆಡೊಕ್ಕಾಗಲ್ಲ.
೧೧೫ನನಗೆ ನಿನಗೆ ಹಿತ ಇಲ್ಲನಿನ್ನ ಬಿಟ್ಟು ನನಗೆ ಗತಿ ಇಲ್ಲ ಎಂದಂತೆ.
೧೧೬ನೆಂಟ್ರು ಮನೆಗೆ ಮೂಲಕುಂಟೆತ್ತು ಹೊಲಕ್ಕೆ ಮೂಲ.
೧೧೭ನರಗುಂದಕ್ಕೆ ಹೊದರೆ ಕುರು ತಪ್ಪೀತೆ?
೧೧೮ನಾಮವಿದ್ದವನಿಗೆ ಕಾಮ ಕಡಿಮೆಯೇ?
೧೧೯ಹಲ್ಲಿ ಶಕುನ ಕೇಳಿ ಕಲ್ಲಿಂದ ಹೊಡೆಸಿಕೊಂಡಂತೆ.
೧೨೦ಸಾಲಗಾರನ ಹೆಂಡತಿ ಶೋಕಿಮಾಡಿದರೇನು?
೧೨೧ವೈಕುಂಠಕ್ಕೆ ಹೋಗಲಿಕ್ಕೆ ಕುಂಟು ದಾಸಯ್ಯನ ಮಧ್ಯಸ್ತಿಕೆಯೇ?
೧೨೨ಮೂರು ಕಾಸಿನ ಮಾಂಸವಿಲ್ಲದಿದ್ದರೂಮಾತು ಮಾತ್ರ ಜೋರು.
೧೨೩ರೊಕ್ಕ ಕೊಟ್ಟು ರಟ್ಟೆ ಮುರಿಸಿಕೊಂಡಂತೆ.
೧೨೪ಜಾತಿ ನೀತಿಯಿಲ್ಲಮಾರಿಗೆ ಕರುಣೆ ಇಲ್ಲ.
೧೨೫ಹೂಡಿದರೆ ಒಲೆಮಡಿದರೆ ಮನೆ.
೧೨೬ಹತ್ತು ಜನರ ಹುಲ್ಲು ಕಡ್ಡಿ ಒಬ್ಬನಿಗೆ ತಲೆ ಹೊರೆ.
೧೨೭ಪಂಗಡವಾದವ ಸಂಗಡ ಬಂದಾನೆ?
೧೨೮ಅಗ್ನಿಗೆ ತಂಪುಂಟೆವಿಷಕ್ಕೆ ರುಚಿಯುಂಟೆದಾರಿಕೋರನಿಗೆ ಧರ್ಮವುಂಟೆ?
೧೨೯ಬಸವನ ಹಿಂದೆ ಬಾಲಲಗ್ನದ ಹಿಂದೆ ಸಾಲ.
೧೩೦ತುಪ್ಪ ತಿಂದ ಮಾತಿಗಷ್ಟು ತಪ್ಪು ಮಾತು ಬಂತು.
೧೩೧ತೇರಾದ ಮೇಲೆ ಜಾತ್ರೆ ಸೇರಿತು.
೧೩೨ಆಸೆಗೆ ತಕ್ಕ ಪರಿಶ್ರಮ ಬೇಕು.
೧೩೩ಎಲ್ಲರಿಗೂ ಹಿಡಿಸುವ ಸಂಪ್ರದಾಯ ಯಾವುದೂ ಇಲ್ಲ.
೧೩೪ಏನಾದರೂ ಆಗು ಮೊದಲು ಮಾನವನಾಗು.
೧೩೫ಬಕ್ಕಳ ಹೊನ್ನಿದ್ದರೆ ಊರೆಲ್ಲಾ ನೆಂಟರು.
೧೩೬ಕಷ್ಟಗಳು ಹೇಳದೆ ಕೇಳದೆ ಬರೋ ನೆಂಟರ ಹಾಗೆ.
೧೩೭ಕರ್ಪೂರವ ತಿಪ್ಪೇಲಿಟ್ರೂ ತನ್ನ ಸುವಾಸನೆ ಬಿಡದು.
೧೩೮ಗಣೇಶನ್ನ ಮಾಡು ಅಂದ್ರೆ ಅವರ ಅಪ್ಪನ ಮಾಡಿದನಂತೆ.
೧೩೯ಜ್ಞಾನಿ ಬಂದರೆ ಗೌರವಿಸುಹೀನ ಬಂದರೆ ತ್ಯಜಿಸು.
೧೪೦ಚಿನ್ನದ ಸೂಜಿ ಅಂತ ಕಣ್ಣು ಚುಚ್ಚಿಕೊಂಡಾರೆ?
೧೪೧ಟೊಳ್ಳು ಮಾತು ಸುಳ್ಳಿಗಿಂತ ಕಡೆ.
೧೪೨ಠಕ್ಕು ಇರುವವನಿಗೆ ಠಿಕಾಣಿ ಸಿಗದು.
೧೪೩ತೂಕ ಸರಿಯಿದ್ದರೆ ವ್ಯಾಪಾರ.
೧೪೪ನಡೆದಷ್ಟು ನೆಲಪಡೆದಷ್ಟು ಫಲ.
೧೪೫ಮುಳ್ಳು ಬಿತ್ತಿದವನಿಗೆ ನೀನು ಹೂಬಿತ್ತು.
೧೪೬ಪುಷ್ಪ ಡೊಂಕಾದರೇನುಪರಿಮಳ ಡೊಂಕೇ?
೧೪೭ಬುದ್ಧಿಯಿಲ್ಲದವನ ಐಶ್ವರ್ಯಕಡಿವಾಣ ಇಲ್ಲದ ಕುದುರೆಯಂತೆ.
೧೪೮ರಸ್ತೇಲಿ ಕುತ್ಕೊಂಡು ಗಳಗಳನೆ ಅತ್ತರೆ ಹೋದ ಪ್ರಾಯ ಬಂದೀತೆ?
೧೪೯ವೈರತ್ವ ನಾಶಕ್ಕೆ ವಾತ್ಸಲ್ಯವೇ ಮದ್ದು.
೧೫೦ಸಂತೋಷವೇ ಯೌವನಚಿಂತೆಯೇ ಮುಪ್ಪು.
೧೫೧ಹಸಿದವರ ಮುಂದೆ ಭಾಷಣ ಮಾಡಿದ ಹಾಗೆ.
೧೫೨ಹಳೆಯ ಕೋಟು ಧರಿಸಿಹೊಸ ಪುಸ್ತಕ ಕೊಳ್ಳಿ.
೧೫೩ಊಟಕ್ಕೆ ಮೊದಲು ಉಪ್ಪಿನ ಕಾಯಿಮಾತಿಗೆ ಮೊದಲು ಗಾದೆ.
೧೫೪ಆರಿದ್ರೆ ಮಳೆಯಲ್ಲಿ ಆದವನೇ ಒಡೆಯ.
೧೫೫ಸ್ವಾತಿ ಮಳೆ ಬಿದ್ರೆ ಮುತ್ತಿನಂಥ ಜೋಳ.
೧೫೬ಕುಲ ಬಿಟ್ಟರೂ ಛಲ ಬಿಡಬೇಡ.
೧೫೭ಹೊಸ ಮಂಜು ಹಳೆಯದನ್ನು ಕೊಚ್ಚದಿದ್ದೀತೆ.
೧೫೮ಕೆಟ್ಟದಲ್ಲದ ಮೇಲೆ ಪಿಸುಗುಟ್ಟೋದು ಯಾಕೆ?
೧೫೯ಇಬ್ಬರು ಒಪ್ತಾರೆ ಮೂವರು ವಿರೋಧಿಸುತ್ತಾರೆ ಎಂದಂತೆ!
೧೬೦ಮನೇಲಿ ಕತ್ತಲೆಪರರಿಗೆ ದೀಪ ದಾನ ಮಾಡಿದ.
೧೬೧ಇರೋದು ಕಲಿಸುತ್ತೆಇಲ್ಲದ್ದು ನಾಚಿಸುತ್ತೆ.
೧೬೨ಒಬ್ಬನ ಗಡ್ಡಕ್ಕೆ ಬೆಂಕಿ ಹತ್ತಿದಾಗಮತ್ತೊಬ್ಬ ಕೈ ಕಾಯಿಸಿದ.
೧೬೩ಮನೆಯೊಡತಿ ಮುಖದ ಮೇಲೆ ಉಗುಳಿದರೂ ಹೊರಗೆ ಬಂದು ನಾನು ಬೆವತಿದ್ದೇನೆ ಅಂದಂತೆ!
೧೬೪ಹುಲಿ ಹಸಿದಾಗ ಹುಲ್ಲು ತಿಂದೀತೆ?
೧೬೫ಕುದುರೆ ಕುರುಡಾದರೂ ಕಡಿಮೆಯೇನೂ ತಿನ್ನುವುದಿಲ್ಲ!
೧೬೬ದುರುಳನಿಂದಲೇ ದುರುಳುತನ.
೧೬೭ಅಕಾಲದಲ್ಲಿ ಬೆಳೆಯಿದ್ದಂತೆ ವೃದ್ಧಾಪ್ಯದಲ್ಲಿ ಮಕ್ಕಳು.
೧೬೮ನೆಂಟರನ್ನು ಲಕ್ಷಿಸದಿರಲುಸ್ನೇಹಿತರನ್ನು ಅಲಕ್ಷಿಸದಿರು.
೧೬೯ಕಸದಲ್ಲಿ ಮಲಗಿ ಅರಮನೆ ಕನಸು ಕಂಡಂತೆ.
೧೭೦ಮಧ್ಯಾಹ್ನದ ಊಟವಾದಮೇಲೆ ಮುಳ್ಳಿನ ಮೇಲಾದರೂ ಮಲಗುರಾತ್ರಿ ಊಟವಾದ ಮೇಲೆ ಅರ್ಧ ಮೈಲಿ ನಡೆ.
೧೭೧ಹುಟ್ಟಿನಿಂದಲೇ ವಕ್ರವಾದದ್ದುಪೋಷಣೆಯ ಮೂಲಕ ಸರಿಯಾದಂತೆ.
೧೭೨ಬಾವಿಯ ಬಾಯನ್ನು ಮುಚ್ಚಬಹುದುಜನಗಳ ಬಾಯನ್ನಲ್ಲ.
೧೭೩ಆಳವಿಲ್ಲದ ನೀರು ಭಾರಿ ಶಬ್ದ ಮಾಡೀತು.
೧೭೪ತನ್ನ ಯಂತ್ರಕ್ಕೆ ಎಣ್ಣೆ ಹಾಕಲೂ ಆಗದವ ಇನ್ನೊಬ್ಬರಿಗೆ ಉಪದೇಶ ನೀಡಿದಂತೆ.
೧೭೫ಪಾದಕ್ಕೆ ತಕ್ಕಂತೆ ಚಪ್ಪಲಿ ತಗೊಬಾಗಿಲಿನೆತ್ತರಕ್ಕೆ ತಕ್ಕಂತೆ ಬಗ್ಗಿ ನಡಿ.
೧೭೬ಮನೆಯ ಕಷ್ಟಕ್ಕೆ ನೆರೆಮನೆಯವರು ಹೊಣೆ ಏನು?
೧೭೭ಮನೆಯ ಬಾಗಿಲಿಗೆ ಬೀಗ ಹಾಕಿಕೋಮನದ ಬಾಗಿಲನ್ನು ತೆರೆದಿಡು.
೧೭೮ನಗುವೇ ಆರೋಗ್ಯದ ಗುಟ್ಟು.
೧೭೯ಈರುಳ್ಳಿಬೆಳ್ಳುಳ್ಳಿಯನ್ನು ತಿನ್ನುರೋಗವನ್ನು ದೂರವಿಡು.
೧೮೦ಬೆಕ್ಕು ನಮ್ಮನೇದುಹಾಲು ಪಕ್ಕದ ಮನೇದು.
೧೮೧ಕಹಿ ಪದಾರ್ಥ ತಿಂದು ಸಿಹಿ ಮಾತನಾಡು.
೧೮೨ಮುಖ ನೋಡಿ ಮನ ತಿಳಿ.
೧೮೩ಮಾತು ಚಿಕ್ಕದಾಗಿರಲಿಕೆಲಸ ಚೊಕ್ಕವಾಗಿರಲಿ.
೧೮೪ಮಾತು ಮೊಳದುದ್ದಕೆಲಸ ಕಿರುಬೆರಳುದ್ದ.
೧೮೫ಮನೆಮನ ಓಡೆದರೆ ಅಂಟಿಸಲಾಗದ ಕನ್ನಡಿಯಂತೆ.
೧೮೬ಕೋಪ ಕೆಲಸ ಕೆಡಿಸುತ್ತೆಶಾಂತಿ ಮುಂದೆ ನಡೆಸುತ್ತೆ.
೧೮೭ಮನುಜನಾಗಿ ಹುಟ್ಟಿ ಪಶುವಿನಂತೆ ಬದುಕಿದಂತೆ!
೧೮೮ಕಳೆದ ದಿನಗಳು ಬರೆದ ಪುಟಗಳಂತೆ.
೧೮೯ಪರಿಚಿತರ ಮರೆಯಬೇಡಅಪರಿಚಿತರ ನಂಬಬೇಡ.
೧೯೦ಹಲ್ಲಿಲ್ಲದಿದ್ದರೂ ಚಕ್ಕುಲಿ ತಿನ್ನೋ ಚಪಲ.
೧೯೧ಒಗ್ಗಿದರೆ ಮನೆಯಾದರೇನುಸ್ಮಶಾನವಾದರೇನು?
೧೯೨ಕೆಡುವವರು ಮನೇಲಿದ್ರು ಕೆಡುತ್ತಾರೆ.
೧೯೩ನಮ್ಮಬುದ್ಧಿ ಪರರ ಕೈಯಲ್ಲಿದ್ದಂತೆ.
೧೯೪ಮೆತ್ತಗಿದ್ರೆ ತುಳೀತಾರೆಜೋರಾಗಿದ್ರೆ ಹೆದ್ರತಾರೆ.
೧೯೫ನೋಡಿ ನಡೆದಾಗ ಎಡವೋದು ತಪ್ಪುತ್ತೆ.
೧೯೬ತೀರ್ಥ ಎಂದು ಎಲ್ಲೆಲ್ಲೋ ನೀರು ಕುಡಿದಂತೆ!
೧೯೭ಹಳೇ ಚಪ್ಪಲಿ ಆದ್ರೂ ಪರವಾಗಿಲ್ಲಬರಿಗಾಲಲ್ಲಿ ನಡೀಬೇಡ.
೧೯೮ರೈತನ ಮುಗ್ಗು ನಾಡಿನ ಕುಗ್ಗು.
೧೯೯ದರಿದ್ರ ಏಳಗೊಡುವುದಿಲ್ಲಆಲಸ್ಯ ಉಣಗೊಡುವುದಿಲ್ಲ.
೨೦೦ನಾಚಿಕೆ ಬಿಟ್ಟವ ಊರಿಗೇ ದೊಡ್ಡವ.        
೨೦೧ಎರೆ-ತೆರೆ ಬಂಗಾರಮರಳು ಬರೀ ಸಿಂಗಾರ!
೨೦೨ಹತ್ತೋಕ್ ಮೊದ್ಲು ಕುದರೆ ನೋಡುಬಿತ್ತೊಕ್ ಮೊದ್ಲು ಹೊಲ ನೋಡು.
೨೦೩ಅಶ್ವಿನೀ ಸಸ್ಯನಾಶಿನೀ.
೨೦೪ಭರಣಿ ಮಳೆ ಧರಣಿ ಬೆಳೆ.
೨೦೫ರೋಹಿಣಿ ಮಳೆ ಓಣಿಯೆಲ್ಲಾ ಕೆಸರು.
೨೦೬ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ.
೨೦೭ಆದರೆ ಆರಿದ್ರಾ ಇಲ್ವಾದ್ರೆ ದರಿದ್ರ!
೨೦೮ಹಸ್ತ ಇಲ್ದಿದ್ರೆ ಒಕ್ಕಲಿಗ ಹಲ್ಲು ಕಿಸ್ದ.
೨೦೯ಸ್ವಾತಿ ಮಳೆ ಮುತ್ತಿನ ಬೆಳೆ.
೨೧೦ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ.
೨೧೧ಅನುರಾಧ ಬಂದರೆ ನಮ್ಮ ರಾಗಿ ನಮ್ಮದು.
೨೧೨ಚಿತ್ತಾ ಮಳೆ ವಿಚಿತ್ರ ಬೆಳೆ!
೨೧೩ಪೂರ್ವಾಷಾಢ-ಉತ್ತರಾಷಾಢ ಬೇಡವೇ ಬೇಡ.
೨೧೪ಬಾಡಿಗೆ ಎತ್ತು ಅಂತ ಹೊಡಿದು ಬಡಿಬಾರದು.
೨೧೫ಆಕಳಿಲ್ಲದವ ಬೆಳೆಸು ಮಾಡ್ಯಾನಆಕಳಿದ್ದವ ಮಕ್ಕಳ ಸಾಕ್ಯಾನ.
೨೧೬ಉಣಬೇಕುಉಡಬೇಕು ಎಂಬೋದಾದ್ರೆ ಎಮ್ಮೆ ಕಟ್ಟಬೇಕು.
೨೧೭ಬಾಳೆ ಬೆಳೆದವ ಬಾಳಿಯಾನು.
೨೧೮ತೆಂಗು ಬೆಳೆದವನಿಗೂ ಗಂಡು ಹೆಡೆದವಳಿಗೂ ಚಿಂತೆಯಿಲ್ಲ.
೨೧೯ತೋಟ ಮಾಡಿದವನಿಗೆ ಕೋಟಲೆಯಿಲ್ಲ.
೨೨೦ಬಲ್ಲಿದವನಿಗೆ ಕಬ್ಬು.
೨೨೧ಆದರೆ ಒಂದಡಿಕೆ ಮರಹೋದರೆ ಒಂದು ಗೋಟು.
೨೨೨ತಂದೆತಾಯಿ ಸತ್ತರೂ ಸೋದರ ಮಾವ ಇರಬೇಕು.
೨೨೩ವಿದ್ಯಾವಂತನಾದರೆ ಜಗತ್ತಿನ ಆಡಳಿತವನ್ನೇ ನಡೆಸಬಹುದು.
೨೨೪ಪರಿಸರ ಮಾಲಿನ್ಯ ವಿನಾಶಕ್ಕೆ ಕಾರಣ.
೨೨೫ದೇಹಕ್ಕೆ ಮುಪ್ಪಾದರೇನಾಯ್ತುಅಧ್ಯಯನಕ್ಕೆ ಮುಪ್ಪಿದೆಯೇ?
೨೨೬ಶರಣು ಆದವನಿಗೆ ಮರಣವಿಲ್ಲ.
೨೨೭ಜಾಣನಿಗೆ ಮೂರು ದಾರಿಕೋಣನಿಗೆ ಒಂದೇ ದಾರಿ.
೨೨೮ಗುರುವಿಲ್ಲದೇ ಮಠವಿಲ್ಲಹಿರಿಯರಿಲ್ಲದೆ ಮನೆಯಿಲ್ಲ.
೨೨೯ಮನೆ ಗೆದ್ದು ಮಾರು ಗೆಲ್ಲು.
೨೩೦ಮಾತು ಅಂಗಾರ ಮೌನ ಬಂಗಾರ
೨೩೧ಗುರಿಯಿಟ್ಟು ಗುಂಡು ಹಾಕುಸಮಯ ಸಾಧಿಸಿ ಬೇಟೆಯಾಡು.
೨೩೨ಮನೆಯಲ್ಲಿ ರಾಮಣ್ಣನಂತೆಬೀದಿಯಲ್ಲಿ ಕಾಮಣ್ಣನಂತೆ.
೨೩೩ಕೆಟ್ಟದ್ದನ್ನು ಬಯಸಬೇಡಒಳ್ಳೆಯದನ್ನು ಬಿಡಬೇಡ.
೨೩೪ಮಾನವನಾದ ಮೇಲೆ ಮೂರು ಆಕ್ಷರ ಮೊದಲು ಕಲಿ.
೨೩೫ಒಲೆಯಮೇಲೆ ಇಟ್ಟಾಗ ಉಕ್ಕಿದಂತೆ ಹಾಲುಒಗ್ಗಟ್ಟಿಲ್ಲದ ಮನೆ ಬೀದಿಪಾಲು.
೨೩೬ಬಾಲ್ಯವಿಲ್ಲದೆ ಯೌವ್ವನವಿಲ್ಲಯೌವ್ವನವಿಲ್ಲದೆ ಮುಪ್ಪಿಲ್ಲ.
೨೩೭ದಯವಿಲ್ಲದ ಧರ್ಮವಿಲ್ಲ.
೨೩೮ಮಾತಿಗೆ ನೆಲೆಯಿಲ್ಲಪ್ರೇಮಕ್ಕೆ ಬೆಲೆಯಿಲ್ಲ.
೨೩೯ಕೋಣನಿಗೆ ಏನು ಗೊತ್ತು ಲತ್ತೆ ಪೆಟ್ಟು.
೨೪೦ಆಸೆಯಿಲ್ಲದವನು ದೇಶಕ್ಕೆ ಶ್ರೀಮಂತ.
೨೪೧ಇನ್ನೊಬ್ಬರ ಮಾತಿಗೆ ಕಿವಿಗೊಡಬೇಡಚಾಡಿಹೇಳಿ ಜಗಳ ಹಚ್ಚಬೇಡ.
೨೪೨ಕೋಣನಾಗಿರುವುದಕ್ಕಿಂತ ಜಾಣನಾಗಿರುವುದು ಲೇಸು.
೨೪೩ಗೆಳೆತನದಲ್ಲಿ ಮೋಸಮಾಡಬೇಡ.
೨೪೪ಬಾಯಿಯಲ್ಲಿ ಬೆಲ್ಲ ಎದೆಯಲ್ಲಿ ನೀಚತನ.
೨೪೫ಹಿಮಾಲಯದಲ್ಲಿ ಹಿಮ ಹೆಚ್ಚಂತೆವೀರಭದ್ರನಲ್ಲಿ ಅವತಾರ ಹೆಚ್ಚಂತೆ.
೨೪೬ಕಾಯಕವನ್ನು ಸದಾ ಮಾಡುಸೋಮಾರಿತನವನ್ನು ಬಿಡು.
೨೪೭ಮೈತುಂಬ ಕಣ್ಣಿರಲಿಕೈಯಲ್ಲಿ ಪೆನ್ನಿರಲಿ.
೨೪೮ಹಿರಿಯರ ಮಾತಿಗೆ ಕಿವಿಗೊಡುಚುಚ್ಚುಮಾತಿಗೆ ಬೆನ್ನು ಕೊಡು.
೨೪೯ವಿನಯದಿಂದ ವಿಶ್ವವನ್ನು ಗೆಲ್ಲುಪರನಿಂದೆ ಮಹಾಪಾಪ.
೨೫೦ಮೊದಲು ಕಣ್ಣು ಬಿಡುನಂತರ ಕೈ ಮಾಡು.
೨೫೧ನಿನ್ನಿಂದ ಆದ ಪಾಪಅದೇ ನಿನಗೆ ಶಾಪ.
೨೫೨ನಿಂತ ನೀರಿನಲ್ಲಿ ಕ್ರಿಮಿ ಹುಟ್ಟುತ್ತವೆಕೆಲಸವಿಲ್ಲದ ಮನುಷ್ಯನಲ್ಲಿ ಕೆಟ್ಟ ವಿಚಾರಗಳು ಜನಿಸುತ್ತವೆ.
೨೫೩ಖೀರು ಕುಡಿದವ ಓಡಿಹೋದನೀರು ಕುಡಿದವ ಸಿಕ್ಕಿಬಿದ್ದ.
೨೫೪ಯಾದವೇಂದ್ರ ದನ ಕಾದರಾಘವೇಂದ್ರ ರಾಜ್ಯವಾಳಿದ.
೨೫೫ಹಟ್ಟಿ ತುಂಬಾ ಹಸುಹಾಲು ಮಾತ್ರ ತುಸು.
೨೫೬ಹಾಲು ಕುಡಿದು ಹಾಗಲಕಾಯಿ ತಿಂದಂತೆ.
೨೫೭ಹುಲಿಗಲ್ಲಸಿಂಹಕ್ಕಲ್ಲಮನೆಯ ಹೆಂಡತಿಯ ನೆರಳಿಗಂಜಿದ.
೨೫೮ಕೋಳಿಯ ಕಾಲಿಗೆ ಗೆಜ್ಜೆ ಕಟ್ಟಿದರೆ ತಿಪ್ಪೆ ಕೆದರುವುದನ್ನು ಬಿಟ್ಟೀತೆ?
೨೫೯ಏನು ಬೇಡಿದರೊಬ್ಬ ದಾನಿಯನ್ನು ಬೇಡುದೀನನಾ ಬೇಡಿದರೆ  ದೀನ ಏನು ಕೊಟ್ಟಾನು?
೨೬೦ಇತ್ತಿತ್ತ ಬಾ ಎಂದರೆ ಹೆಗಲೇರಿ ಕುಳಿತ.
೨೬೧ಹಣದಲ್ಲಿ ಬಡವನಾದರೂ ಬುದ್ಧಿಯಲ್ಲಿ ಬಡವನಾಗಬಾರದು.
೨೬೨ಹಣವಿಲ್ಲದ ಮನುಷ್ಯರೆಕ್ಕೆ ಇಲ್ಲದ ಪಕ್ಷಿಯಂತೆ.
೨೬೩ಹಡಗಿನ ವ್ಯಾಪರಉಪ್ಪಿಗೆ ಬಡತನ.
೨೬೪ಬುದ್ಧಿಗಳ್ಳನಿಗೆಲ್ಲಿ ಸತ್ಯಸದಾಚಾರ!
೨೬೫ಚಾತುರ್ಯ ಬಲ್ಲವನಿಗೆ ಚಾಚೂ ಚಿಂತಿಲ್ಲ.
೨೬೬ಸತ್ತವರಿಗೆ ಸಂಗವಿಲ್ಲಕೆಟ್ಟವರಿಗೆ ನೆಂಟರಿಲ್ಲ.
೨೬೭ನಿದ್ದೆಗೆ ಮದ್ದಿಲ್ಲವಜ್ರಕ್ಕೆ ಬೆಲೆಯಿಲ್ಲ.
೨೬೮ಮನೆ ಮಕ್ಕಳು ಮಾಣಿಕ್ಯನೆರೆಮನೆ ಮಕ್ಕಳು ಕಸಿವಿಸಿ.
೨೬೯ಹೆಣ್ಮಕ್ಕಳಿಗೆ ತಾಯಿ ಶಿಕ್ಷೆ,, ಗಂಡ್ಮಕ್ಕಳ್ಳಿಗೆ ತಂದೆ ಶಿಕ್ಷೆ.
೨೭೦ಮುಖಕ್ಕೆ ಮೂಗು ಚೆಂದಮೂಗಿಗೆ ಮೇಲೆರಡು ಕಣ್ಣು ಚೆಂದ.
೨೭೧ವಯಸ್ಸಿಗೆ ತಕ್ಕ ಬುದ್ಧಿ ಕಲಿ.
೨೭೨ಕಾಲಿದ್ದವನಿಗೆ ಆಟಕಣ್ಣಿದ್ದವನಿಗೆ ನೋಟ.
೨೭೩ಉಗುಳಿ ಉಗುಳಿ ರೋಗಬೊಗಳಿ ಬೊಗಳಿ ರಾಗ.
೨೭೪ಆಸೆ ಆಸ್ತಿ ಮಾಡ್ತುದುರಾಸೆ ನಾಶ ಮಾಡ್ತು.
೨೭೫ಅಪಕೀರ್ತಿ ತರುವ ಮಗನಿಗಿಂತಸತ್ಕೀರ್ತಿ ತರುವ ಆಳೇ ಮೇಲು.
೨೭೬ಕೊಟ್ಟು ಕೆಟ್ಟವರಿಲ್ಲತಿಂದು ಬದುಕಿದವರಿಲ್ಲ.
೨೭೭ಸಮಯಕ್ಕೆ ಬಾರದ ಬುದ್ಧಿಸಾವಿರ ಇದ್ದರು ಲದ್ದಿ,
೨೭೮ಹೊರಗೆ ಝಗ ಝಗಒಳಗೆ ಭಗ ಭಗ.
೨೭೯ಕಲ್ಲಾದರು ಕರಗಬಹುದುಕಪಟಿಯ ಮನಸ್ಸು ಕರಗದು.
೨೮೦ಮೂಕವೇದನೆಯು ಸತ್ಯಕ್ಕಿಂತ ಮೇಲು.
೨೮೧ಕೃತಿಯಿಲ್ಲದ ಮಾತುಕಸ ಬೆಳೆದ ತೋಟವಿದ್ದಂತೆ.
೨೮೨ಒಳ್ಳೆಯ ಕೆಲಸಕ್ಕೆ ವಿಘ್ನ ಹೆಚ್ಚು.
೨೮೩ಲೆಕ್ಕಕ್ಕಿಂತ ಹೆಚ್ಚು ಹೊರಬಾರದುಲೆಕ್ಕಕ್ಕಿಂತ ಹೆಚ್ಚು ದೂರೆಬಾರದು.
೨೮೪ಅರ್ಧ ಕಲಿತವನ ಆಬ್ಬರ ಹೆಚ್ಚು.
೨೮೫ದೇಶ ತಿರುಗಬೇಕುಭಾಷೆ ಕಲಿಯಬೇಕು.
೨೮೬ಆಸೆಗೆ ಮಿತಿಯಿಲ್ಲಆಕಾಶಕ್ಕೆ ಅಳತೆಯಿಲ್ಲ.
೨೮೭ಅಲ್ಪರ ಸಂಗ ಅಭಿಮಾನ ಭಂಗ.
೨೮೮ಸಂಕೋಚ ಮಾಡಿದರೆ ಸಂಕಪಾಷಾಣವೂ ಸಿಗದು.
೨೮೯ಬಾವಿ ತೋಡದೆ ನೀರು ಸಿಗದುಪ್ರಯತ್ನ ಮಾಡದೆ ಫಲ ಸಿಗದು.
೨೯೦ಪಡಿತಿಂದು ಗುಡಿಯಲ್ಲಿ ಉರುಳಾಡಿದ.
೨೯೧ನೋಡಿ ನಡೆದವನಿಗೆ ಕೇಡಿಲ್ಲ.
೨೯೨ಪದವೂ ಮುಗಿಯಿತುತಂತಿಯೂ ಹರಿಯಿತು.
೨೯೩ಪದವಿ ಬಂದ ಬಳಿಕ ಮದವೂ ಬರತಕ್ಕದ್ದೆ.
೨೯೪ಪಾಪಕ್ಕೆ ಹೆದರುತಾಪಕ್ಕೆ ಹೆದರದಿರು.
೨೯೫ಪುಷ್ಪವಿಲ್ಲದ ಪೂಜೆಅಶ್ವವಿಲ್ಲದ ಅರಸನಿಗೆ ಸಮ.
೨೯೬ಮಗ ಸಣ್ಣವನಾದರೂಮಾತು ಸಣ್ಣದಲ್ಲ.
೨೯೭ಮಂತ್ರ ಸ್ವಲ್ಪಉಗುಳೇ ಬಹಳ.
೨೯೮ಮಾನ ಹೋದ ಮೇಲೆ ಮರಣ ಬಂದ ಹಾಗೆ.
೨೯೯ಬೆಲ್ಲವಿದ್ದಲ್ಲಿ ನೊಣಕೆಂಡವಿದ್ದಲ್ಲಿ ಕಾವು.
೩೦೦ಬೇಕಾದ ಮಾತುಬೆಲ್ಲಕ್ಕಿಂತ ಸವಿ.
೩೦೧ಬಾಯಿ ಬಂಗಾರಮನ ಅಂಗಾರ.
೩೦೨ಬಾಯಿಯಿದ್ದ ಮಗ ಬದುಕುವನು.
೩೦೩ಭಾರವಾದ ಪಾಪಕ್ಕೆ ಘೋರವಾದ ನರಕ.
೩೦೪ಬೀಜದಂತೆ ವೃಕ್ಷವೃಕ್ಷದಂತೆ ಬೀಜ.
೩೦೫ಬಿಸಿಯಾದರೆ ಮಾತ್ರ ಬೆಣ್ಣೆ ಕರಗುವುದು.
೩೦೬ಕಲಿತವನಿಗಿಂತ ನುರಿತವನೇ ಮೇಲು.
೩೦೭ಕಷ್ಟದಂತೆ ಫಲಮನದಂತೆ ಮಹಾದೇವ.
೩೦೮ಕೀಟ ಸಣ್ಣದಾದರೂ ಕಾಟ ಬಹಳ.
೩೦೯ಕುರಿ ಹಿಂಡಲ್ಲಿ ತೋಳ ಹೊಕ್ಕಂತೆ.
೩೧೦ಕೂಳಿಗೆ ಮೂಲ ಭೂಮಿಗೆ ಭಾರ.
೩೧೧ಕೇಳುವವರ ಮುಂದೆ ಹೇಳುವವರು ದಡ್ಡರು.
೩೧೨ಹಿರಿಯರಿಗೆ ಶಿರಬಾಗುಗುರುವಿಗೆ ತಲೆಬಾಗು.
೩೧೩ಹಿಡಿ ತುಂಬ ಹಣವಿದ್ದರು ಗುಡಿ ಚೆನ್ನಾಗಿರಬೇಕು.
೩೧೪ಹಸಿದವನಿಗೆ ಹಳಸಿದ್ದೇ ಪಾವನ.
೩೧೫ಹರಿದಿದ್ದೇ ಹಳ್ಳನಿಂತಿದ್ದೇ ತೀರ್ಥ.
೩೧೬ಸುಳ್ಳು ಹೇಳುವುದಕ್ಕಿಂತ ಸುಮ್ಮನಿರುವುದು ಲೇಸು.
೩೧೭ಸುಣ್ಣ ತಿಂದ ಮಂಗ ಹಲ್ಲು ಕಿಸಿದಂತೆ.
೩೧೮ಸುಡುಗಾಡಿನಲ್ಲಿ ಕುಳಿತು ಸುಖ ಬಯಸಿದಂತೆ.
೩೧೯ಎಣ್ಣೆ ತಣ್ಣಗಾದರೆ ಬೆಣ್ಣೆಯ ಹಾಗೆ ಇದ್ದೀತೆ?
೩೨೦ಅಹಂಕಾರ ಇದ್ದ ಮನುಷ್ಯ ಏನನ್ನೂ ಸಾಧಿಸಲಾರ.
೩೨೧ಕಡಲೆಗೆ ಮುಂದು ಕಡಿವಾಣಕ್ಕೆ ಹಿಂದು.
೩೨೨ಆಸೆಯೇ ಜೀವನಜೀವನವೇ ಆಸೆ.
೩೨೩ಎಡವಿದ ಕಾಲೇ ಎಡವುದು ಹೆಚ್ಚು.
೩೨೪ಸಾವಿಲ್ಲದ ಮನೆಯಿಲ್ಲಸೋಲಿಲ್ಲದ ಮನುಷ್ಯನಿಲ್ಲ.
೩೨೫ಎಣ್ಣೆ ಬರುವಾಗ ಗಾಣ ಮುರೀತು.
೩೨೬ಆದರೆ ಹಬ್ಬಇಲ್ಲದಿದ್ದರೆ ಬರಗಾಲ.
೩೨೭ಗಿಡ ಮೂರು ಮೊಳಕಾಯಿ ಆರು ಮೊಳ.
೩೨೮ಕಂಚು ಕಡೆಯಲ್ಲಹಂಚು ದ್ರವ್ಯವಲ್ಲ.
೩೨೯ಭೂಮಿಯಿಂದ ಆಕಾಶಕ್ಕೆ ಏಣಿಯನ್ನು ಇಟ್ಟ.
೩೩೦ಕಳ್ಳ ಹೊಕ್ಕ ಮನೆಗೆ ಎಣ್ಣೆ ದಂಡ.
೩೩೧ಅಕ್ಷರ ಕಲಿಯುವುದಕ್ಕೆ ಬೇಧಭಾವ ಬೇಡ.
೩೩೨ಉರುಳುವ ಕಲ್ಲಿಗೆ ಏನೂ ಅಂಟುವುದಿಲ್ಲ.
೩೩೩ಪಂಜರದಲ್ಲಿ ಕಾಗೆ ಇಟ್ಟರೆ ಪಂಚಮ ಸ್ವರ ಕೊಟ್ಟೀತೆ?
೩೩೪ಅಪಾಯ ತೀರಿತುದೇವರನ್ನು ಮರೆತಾಯಿತು.
೩೩೫ಪ್ರೀತಿಗೊಂದು ಮುತ್ತುಹಸಿವಿಗೊಂದು ತುತ್ತು.
೩೩೬ಕತ್ತಿ ಬಂಗಾರದ್ದಾಗಿದೆಯೆಂದು ಕತ್ತು ಕೊಯ್ದುಕೊಳ್ಳಲು ಸಾಧ್ಯವೇ?
೩೩೭ಎಣ್ಣೆ ಚೆಲ್ಲಿದವನೂ ಅತ್ತಕಾಯಿ ಚೆಲ್ಲಿದವನೂ ಅತ್ತ.
೩೩೮ಹೊಳೆಗೆ ಸುರಿದರೂ ಅಳೆದು ಸುರಿ ಎಂದಂತೆ.
೩೩೯ಬಾಳೆಗೊಂದು ಗೊನೆಬಾಳಿಗೊಂದು ಮಾತು.
೩೪೦ಮಾತು ಆಡಿದರೆ ಮುತ್ತಿನ ಹಾರದಂತಿರಬೇಕು.
೩೪೧ಮರ ನೆಟ್ಟು ಪಾಪವನ್ನು ಕಳೆದುಕೋ.
೩೪೨ಅಪ್ಪನ ಮಾತು ಕೇಳದವನು ಅಮ್ಮನ ಮಾತು ಕೇಳಿಯಾನೆ?
೩೪೩ಮೂರು ವರ್ಷದ ಬುದ್ಧಿ ನೂರು ವರುಷದ ತನಕ.
೩೪೪ನೀರುಗಣ್ಣಿನ ಹೆಂಗಸು ಊರು ಹಾಳು ಮಾಡಿದಳಂತೆ.
೩೪೫ಸೆಗಣಿ ಮೇಲೆ ಕಲ್ಲು ಹಾಕಿಮುಖಕ್ಕೆ ಸಿಡಿಸಿಕೊಂಡಂತೆ.
೩೪೬ಆಸೆ ಆಕಾಶದಷ್ಟುಸಾಧನೆ ಸಾಸಿವೆಯಷ್ಟೇ.
೩೪೭ಇಲಿ ಬೇಟೆಗೆ ತಮಟೆ ಬಡಿದಂಗೆ.
೩೪೮ಉಳಿ ಸಣ್ಣದಾದರು ಕುಳಿ ತೋಡದೆ ಬಿಡಲಾರದು.
೩೪೯ಕಡಲೆ ತಿಂದು ಕೈತೊಳೆದ ಹಾಗೆ.
೩೫೦ಮದುವೆ ಸಂಭ್ರಮದಲ್ಲಿ ತಾಳಿ ಕಟ್ಟುವುದನ್ನೇ ಮರೆತಂತೆ.
೩೫೧ತುಂಟ ಮಂಟಪಕ್ಕೋದರೂ ತುಂಟತನ ಬಿಡಲಿಲ್ಲ.
೩೫೨ಹೆಂಡತಿ ಮುಂದಿರಬೇಕುಮಗ ಹಿಂದಿರಬೇಕು.
೩೫೩ಕಜ್ಜಿ ಕೆರೆದಷ್ಟು ಹಿತಚಾಕೂ ಮಸೆದಷ್ಟೂ ಹರಿತ.
೩೫೪ಕೋಟಿಗೆ ಒಬ್ಬ ಕುಬೇರನೋಟಕ್ಕೆ ಒಬ್ಬ ಸುಂದರ.
೩೫೫ಜಾತಿ ಜಾತಿಗೆ ವೈರಿನಾಯಿ ನಾಯಿಗೆ ವೈರಿ.
೩೫೬ಮದುವೆ ಸಾಲ ಮಸಣಾದವರೆಗೂ.
೩೫೭ನೂಲಿನಂತೆ ಸೀರೆಬೀಜದಂತೆ ವೃಕ್ಷ.
೩೫೮ಶ್ರೀಮಂತನ ಮನೆ ಸೀಮಂತಕ್ಕೆ ಬಡವ ಬಡಬಡಿಸಿದ ಹಾಗೆ.
೩೫೯ಮೊಸರು ಇಟ್ಟುಕೊಂಡು ಮಜ್ಜಿಗೆಗೆ ಅತ್ತಹಾಗೆ.
೩೬೦ಕುಡಿಗೆ ಕುಂಬಳಕಾಯಿ ಭಾರವೇ?
೩೬೧ಮಾವನು ಇಲ್ಲದ ಮನೆಯೇಕೆಹೆಂಡತಿಯಿಲ್ಲದ ಒಡವೆಯೇಕೆ?
೩೬೨ಊಟವಿಲ್ಲದ ಉಪದೇಶಿ ಊರಿಗೆಲ್ಲಾ ನಿವಾಸಿ.
೩೬೩ಸೋಲಿಲ್ಲದ ಸರದಾರನಿಲ್ಲಸಂಗಮವಿಲ್ಲದ ಸಾವಿಲ್ಲ.
೩೬೪ಪ್ರೇಮಿಗಳಿಲ್ಲದ ನಾಡು ಬರೀ ಶೂನ್ಯದ ಬೀಡು.
೩೬೫ಆತ್ಮೀಯವಾದ ಪ್ರೇಮ ಅಮರವಾದದ್ದು.
೩೬೬ಸ್ನೇಹ ಎಂಬ ಸಂಪಿಗೆ ಸುಮಧುರವಾದದ್ದು.
೩೬೭ತಾಯಿಯ ಪ್ರೀತಿ ಸುಖವಾದದ್ದುತಂದೆಯ ಪ್ರೀತಿ ಮಧುರವಾದದ್ದು.
೩೬೮ಮಮತೆಯ ಮಡಿಲಲ್ಲಿ ತೂಗಬೇಕುಮನಸ್ಸೆಂಬ ಬಂಧನದಲ್ಲಿ ಬೀಳಬೇಕು.
೩೬೯ಸಂಸಾರದಲ್ಲಿ ಸುಖವಿದೆಬಾಳೆಂಬ ಬಂಧನದಲ್ಲಿ ಕಷ್ಟವಿದೆ.
೩೭೦ತಾಯಿಯನ್ನು ನಿಂದಿಸಬೇಡಒಳ್ಳೆಯವರನ್ನು ಬಂಧಿಸಬೇಡ.
೩೭೧ಮನಸ್ಸನ್ನು ನಿಯಂತ್ರಿಸಿ ಜೀವನ ಸಾಗಿಸಿ.
೩೭೨ಮನೆ ಬೆಳಗಲಿ ದೀಪ ಬೇಕುಮಾನವ ಬೆಳಗಲು ಅಕ್ಷರ ಬೇಕು.
೩೭೩ಕತ್ತೆಗೆ ತಿಪ್ಪೆಯೇ ತವರುಮನೆ.
೩೭೪ಕತ್ತೆಗೆ ಯಾಕೆ ಹತ್ತಿಕಾಳು?
೩೭೫ಸಣ್ಣದಿರುವಾಗ ಕತ್ತೆಯೂ ಬಹಳ ಸುಂದರ.
೩೭೬ಕತ್ತೆಯಾಗಬೇಡ ಕಾಗೆಯಾಗು.
೩೭೭ಕತ್ತೆಯ ಹಿಂದೆ ಹೋಳಿಹುಣ್ಣಿಮೆಯಲ್ಲಿ ಮಾತ್ರ ಹೋಗು.
೩೭೮ಅಪದ್ದಕ್ಕೆ ಅಪ್ಪಣೆ ಕೊಟ್ರೆ ಬಾಯಿಗೆ ಬಂದದ್ದೇ ಮಾತು.
೩೭೯ಅಪ್ಪ ಮಾಡಿದ ಪುಣ್ಯ ಮಕ್ಕಳ ಕಾಲಕ್ಕೆ.
೩೮೦ಅಪ್ಪನ ಸಾಲಕ್ಕೆ ಮಗನನ್ನು ತಿಪ್ಪೆ ಮೇಲೆ ಎಳೆದರು.
೩೮೧ಅರಿತರೆ ಮಾತನಾಡುಮರೆತರೆ ಕೂತು ನೋಡು.
೩೮೨ಆಕಾಶ ನೋಡೋಕೆ ನೂಕಾಟವೇಕೆ?
೩೮೩ಗುರುಕೊಟ್ಟ ಜೋಳಿಗೆ ಅಂತ ಗೂಟಕ್ಕೆ ಹಾಕಿದರೆ ಊಟ ಹಾಕೀತೆ?
೩೮೪ಜಾರುವುದು ತಪ್ಪಿದರೆ ಏರುವುದು ಸಾಧ್ಯ.
೩೮೫ಧೂಳಿ ಧೂಪವಾದೀತೆಮಾಳಿಗೆ ಸ್ವರ್ಗವಾದೀತೆ?
೩೮೬ಬಾಳೆಂಬ ಬಂಧನದಲ್ಲಿ ಈಜಬೇಕುಸಂಸಾರ ಎಂಬ ಸಾಗರದಲ್ಲಿ ತೇಲಬೇಕು.
೩೮೭ಹೆಸರು ಸಂಪತ್ತುಕೂಳಿಗಿಲ್ಲ ಒಪ್ಪತ್ತು.
೩೮೮ನೇಯುವ ಕಾಲ ತಪ್ಪಿದರೂಸಾಯುವ ಕಾಲ ತಪ್ಪದು.
೩೮೯ಕೀಳನ ಕೆಣಕಬೇಡಮೇಗಾಲು ತುರಿಸಬೇಡ.
೩೯೦ಹೊಟ್ಟೆ ತುಂಬಿದ ಮೇಲೆ ಕಜ್ಜಾಯವೂ ವಿಷ
೩೯೧ದೇವರನ್ನು ಬಯ್ಯುವವರು ಅರ್ಚಕನನ್ನು ಬಿಟ್ಟಾರೆ?
೩೯೨ಪಿಸಿಗೆ ಒಂದು ಕಾಲ ಲ್ಯಾಪ್‌ಟಾಪ್‌ಗೆ ಒಂದು ಕಾಲ
೩೯೩.  ಟೈಪಿಂಗ್ ಬಾರದವನು ಕೀಬೋರ್ಡ್ ಸರಿಯಿಲ್ಲ ಎಂದನಂತೆ!
೩೯೪ಡಿಸ್ಕ್‌ ಸ್ಪೇಸ್ ಇದ್ದಷ್ಟೇ ಫೈಲ್ ಸೇವ್ ಮಾಡು
೩೯೫.  ಫ್ಲಾಪಿ ಕದ್ದರೂ ಕಳ್ಳಡಿಸ್ಕ್ ಕದ್ದರೂ ಕಳ್ಳ
೩೯೬.  ಇರುವೆಗೆ ಇರುವೆ ಮೈ ಭಾರ,ಆನೆಗೆ ಆನೆ ಮೈ ಭಾರ
೩೯೭.  ಸಾಯ್ತಿನಿ ಸಾಯ್ತಿನಿ ಅಂತ ಸಾವಿರ ಕೋಳಿ ತಿಂದನಂತೆ
೩೯೮.  ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ
೩೯೯.  ಸಾಯೋ ಮುಂದೆ ಸಕ್ಕರೆ ತುಪ್ಪ ತಿನಿಸಿದರಂತೆ
೪೦೦.  ಸಾಲ ಅಂದ್ರೆ ಶೂಲ
೪೦೧.  ಮನಸ್ಸಿದ್ದರೆ ಮಾರ್ಗ
೪೦೨.  ತಲೆಗೆ ಬಿದ್ದ ನೀರು ಕಾಲಿಗೆ ಬೀಳದೆ ಇರುತ್ತದೆಯೇ?
೪೦೩ಮನೇಲಿ ಇಲಿ,ಬೀದೀಲಿ ಹುಲಿ
೪೦೪ಇಲಿಯಾಗಿ ನೂರುದಿನ ಬಾಳೋದಕ್ಕಿಂತ ಹುಲಿಯಾಗಿ ಮೂರು ದಿನ ಬಾಳೋದು ಲೇಸು
೪೦೫ಕಳ್ಳನ್ನ ನಂಬಿದ್ರೂ ಕುಳ್ಳನ್ನ ನಂಬಬಾರದು




No comments:

Post a Comment