Tuesday, March 19, 2013


n
ನುಡಿಮುತ್ತುಗಳು  :~ 

  •   ನೀವು ಕೋಪಿಸ್ಥರಾಗಿದ್ದರೆ ನಿಮಗೆ ಬೇರೆ ಯಾವ ವೈರಿಯೂ ಬೇಕಾಗಿಲ್ಲ . ನೀವು ಬುದ್ಧಿವಂತರಾಗಿದ್ದರೆ ನಿಮಗೆ ಸಿರಿವಂತರ ಅಗತ್ಯವಿಲ್ಲ. -- ನಾವು     ಹೇಗಿರಬೇಕೆಂಬ ವಿವೇಕ ಬೆಳಸಿಕೊಳ್ಳಬೇಕು.
  •  ನಾಚಿಕೆ ಅನ್ನುವುದನ್ನು ಬಿಟ್ಟಾಗ ಮಾನವ ಮೃಗನಾಗುತ್ತಾನೆ.
  •  ನಿಮ್ಮ ನಿನ್ನೆಯ ದಿನ ಇಂದಿನ ದಿನವನ್ನು ನುಂಗದಂತೆ ನೋಡಿಕೊಳ್ಳಿ.
  •   ನಾನು ಪರ್ವತವನ್ನು ಅಲುಗಾಡಿಸಬಲ್ಲೆ ಎಂಬ ನಂಬಿಕೆ ನನಗಿದೆ. ಆದರೆ ದಯೆಯಿಲ್ಲದಿದ್ದರೆ ನಾನು ಏನೂ ಅಲ್ಲ. ನನ್ನಿಂದ ಏನೂ ಆಗುವುದಿಲ್ಲ
  •   ಉತ್ತಮ ಗುರೂ ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು
  •   ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.
  •   ಯಾರ ಯೋಗ್ಯತೆಯನ್ನು ಅವರ ಲೋಪಗಳ ಆಧಾರದ ಮೇಲೆ ನಿರ್ಣಯಿಸಬಾರದು. ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ
  •   ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ.ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.
  •  ಗಾಯ ವಾಸಿಯಾಗಬಹುದು. ಅವಮಾನದ ನೋವು ಎಂದೂ ಮಾಸುವುದಿಲ್ಲ. ಅದ್ದರಿಂದ ಮನಸ್ಸಿಗೆ ಎಂದೂ ಘಾಸಿ ಮಾಡಕೂಡದು.
  •  ಅಲ್ಪ ಜ್ಞಾನವು ಅಪಾಯಕರ. ಅದಕ್ಕಿಂತ ಅಜ್ಞಾನವೇ ಮೇಲು. ಅದ್ದರಿಂದ ಮಾತನಾಡುವ ಅಥವಾ ಭೋದಿಸುವ ಮೊದಲು ಪೂರ್ಣಜ್ಞಾನ ಪಡೆದಿರಬೇಕು.
  •  ನಾವು ವಸ್ತುಗಳನ್ನು ಅವು ಇರುವಂತೆಯೇ ನೋಡುವುದಿಲ್ಲ, ಬದಲಾಗಿ ನಾವಿರುವಂತೆ ನೋಡುತ್ತೇವೆ.
  •  ನಾವು ಬೇರೆಯವರ ಬಗ್ಗೆ ಮಾತಾಡುವಾಗ, ನಾವೆಷ್ಟು ಯೋಗ್ಯರಿದ್ದೇವೆ ಎಂದು  ಯೋಚಿಸಬೇಕು.
  •  ಕಲ್ಪನೆ ಎಂಬುದು ಕೆರಳಿದ ಸಿಂಹವಿದ್ದಂತೆ. ಅದು ಹುಚ್ಚೆದ್ದು ಓಡಲು ಬಿಟ್ಟರೆ ನಿಯಂತ್ರಿಸುವುದು ಕಷ್ಟ. ಮನೋ ನಿಗ್ರಹ ಇರಬೇಕು
  •  ನೀರಿನಲ್ಲಿ ಕಾಣುವ ಪ್ರಾಕ್ರತಿಕ ಸೊಬಗಿನ ಪ್ರತಿಬಿಂಬದಂತೆ, ನಮ್ಮ ಮನಸೂ ದ್ವೇಷ ಅಸೂಯೆಗಳಿಂದ ಮುಕ್ತವಾಗಿರಬೇಕು.
  •  ಒತ್ತಡವು ನಮ್ಮನ್ನು ಸಾಯಿಸುವ ಮೊದಲೇ, ಅದನ್ನು ನಾವು ಸಾಯಿಸಬೇಕು. ಒತ್ತಡ ನಿಭಾಯಿಸುವುದನ್ನು ಕಲಿತರೆ ಜೀವನ ನಿರ್ವಹಣೆ ಸುಲಭ.
  •  ಯಾವುದನ್ನು ನಾವು ಗೌರವಿಸುವುದಿಲ್ಲವೂ ಅದನ್ನು ಮಾಡಹೊರಟರೆ ಸಂತೋಷ ನಮ್ಮ ಪಾಲಿಗಿರುವುದಿಲ್ಲ.
  •  ನಾವು ಒಳ್ಳೆಯ ಕಾರ್ಯಗಳ್ಳನ್ನು ಮಾಡಿದರೆ, ಅವು ನಮ್ಮ ಜೀವನದಲ್ಲಿಯೇ ಪ್ರತಿಫಲಿಸುತ್ತವೆ. ಅಂತೆಯೇ ದುಷ್ಟ ಕೆಲಸಗಳ್ಳನ್ನು ಮಾಡಿದರೆ, ಅವೇ \ನಮ್ಮ ಜೀವನದಲ್ಲಿ ಮತ್ತೆ ಪಾಪವಾಗಿ ನಮ್ಮನ್ನು ಆವರಿಸಿಕೊಳುತ್ತದೆ.
  •  ಇತರರಿಗೆ ಏನಾದರೂ ಹಂಚುವುದಿದ್ದರೆ ಸಂತಸವನ್ನು ಹಂಚಬೇಕು.ಅದಕ್ಕಿಂತ ದೊಡ್ಡದಾದ ದಾನ ಧರ್ಮ ಮತ್ತೊಂದು ಇರಲಿಕ್ಕಿಲ್ಲ.
  •  ಅಸೂಯೆ ಹೆಡೆ ಎತ್ತಿದಾಗ ನಮ್ಮ ಪ್ರೀತಿ ಪಾತ್ರರೂ ಕೂಡ ನಮ್ಮ ವೈರಿಗಳಗುತ್ತಾರೆ, ಆದ್ದರಿಂದ ಮತ್ಸರಕ್ಕೆ ಅವಕಾಶ ಕೊಡಕೂಡದು.
  •  ಮಾತಾಡಿ ಕೆಟ್ಟವರು ಅನ್ನಿಸಿ ಕೊಳ್ಳದಕಿಂತ, ಮೌನವಾಗಿದ್ದು ಅರ್ಥವಾಗದೇ ಉಳಿದುಬೀಡೋದು ಒಳ್ಳೆಯದು.
  •  ಸುಡು ಬೇಸಿಗೆ ಇದ್ದರೂ, ಮಳೆಯ ಆಗಮನ ನೀರಿಕ್ಷಿಸುವ ನವಿಲಿನಂತೆ,ಜೀವನದಲ್ಲಿ ತೊಂದರೆಗಳ ಬಳಿಕ ನೆಮ್ಮದಿ ದಿನಗಳು ಬರದೇಇರವು.....
  •  ನಾವು ಯಾರನ್ನಾದರೂ ಸಂಪೂರ್ಣ ವಾಗಿ ನಂಬಿದರೆ ಎರಡು ಸಾದ್ಯತೆಗಳಿರುತ್ತವೆ. ಒಂದು,ಜೀವಮಾನದಲ್ಲಿ ಮರೆಯಲಾಗದಂತ ಗೆಳೆಯ ಸಿಕ್ಕಾನು, ಇಲ್ಲವೇಮರೆಯಲಾಗದಂತ ಪಾಠ ಕಲಸಿಯಾನು. ನಂಬುವ ಮುನ್ನ ತುಸು ಯೋಚನೆ ಮಾಡಬೇಕು
  •  ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ಒಳ್ಳೆಯದಲ್ಲ,ಅದರಿಂದ ನಾವು ಪ್ರತಿಷ್ಠೆ ಯಾ ಮತ್ಸರ ಎರಡರಲ್ಲಿ ಯಾವುದಾದ ಒಂದರ ಭಾದೆಗೆ ಒಳಗಾಗುತೇವೆ.
  •  ಸಹನೆ ಇಂದ ಇರುವುದು ಕಠಿಣ; ಆದರೆ, ಅದು ನೀಡುವ ಅಂತ್ಯ ಫಲ ಶಾಂತಿ ಹಾಗು ಸಮಾದಾನ.
  •  ಯಾವುದಾದರು ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ನಾವು ಸದಾ ಚಟುವಟಿಕೆಯಿಂದ ಇರಬೇಕು. ಕ್ರಿಯಾಶೀಲ ವ್ಯಕ್ತಿಗೆ ದುಃಖ ,ಚಿಂತೆಗೆ ಸಮಯ ಇರದು.
  •  ನಮ್ಮ ಸ್ಮರಣ ಶಕ್ತಿ ತುಂಬಾ ದುರ್ಬಲ ಎಂದೇ ಸಾಮಾನ್ಯವಾಗಿ ಎಲ್ಲರೂ ಭಾವಿಸುತ್ತೇವೆ.ಆದರೆ ಕೆಲವರನ್ನು ಮರೆಯಲು ಎಷ್ಟೇ ಯತ್ನಿಸಿದರೂ ಅದು ಸಾಧ್ಯವಾಗದಿರುವಾಗ ನಮ್ಮ ನೆನಪಿನ ಶಕ್ತಿ ಎಷ್ಟು ಚೆನ್ನಾಗಿದೆ ಎಂಬುದರ ಅರಿವಾಗುತ್ತದೆ.
  •  ಸೋತು ಹೋಗುತ್ತೇನೆಂಬ ಬಯವನ್ನು ಗೆಲ್ಲುವುದೇ ನಿಜವಾದ ಜಯ.
  •  ಬೇರೆಯವರ ದೋಷ ಹುಡಕುತ್ತಾ ಹೊರಟಂತೆ ನಾವೂ ಅದರ ಬಾಧೆಗೆ ಒಳಗಾಗುತ್ತೇವೆ ದೌರ್ಬಲ್ಯಗಳು ಸೊಂಕಿದ್ದಂತೆ, ಬಲು ಬೇಗ ಅಂಟುತ್ತವೆ.
  •  ನಮ್ಮನ್ನು ಧ್ವೇಷಿಸುವ ಜನರನ್ನು ಧ್ವೇಷಿಸುವುದಕ್ಕೆ ನಮ್ಮ ಸಮಯವನ್ನು ವ್ಯರ್ಥ ಮಾಡಬಾರದು.
  •  ವಿಧ ವಿಧದ ಹೂಗಳ ಮಕರಂದದಿಂದ ಜೇನು ಶೆಕರಣೆಯಾಗುವಂತೆ, ಎಲ್ಲರೂ ಒಟ್ಟಿಗೆ ದುಡಿದಾಗ ಮಾತ್ರ ಅದರ ಫಲಿತಾಂಶ ಸಿಹಿಯಾಗಿರಲು ಸಾಧ್ಯ.
  •  ನಮ್ಮೊಂದಿಗೆ ಜಗಳ ಮಾಡಲು ಹಲವರು ತುದಿಗಾಲ ಮೇಲೆ ನಿಂತಿರುತ್ತಾರೆ, ನಗು ಹಾಗು ಪ್ರೀತಿಯ ಮನೋಭಾವ ನಮ್ಮದಾಗಿರಬೇಕು.
  •  ನಾವು ಸರಿಯಾಗಿದ್ದರೆ ಕೋಪಗೊಳ್ಳುವ ಅಗತ್ಯವಿಲ್ಲ. ನಾವು ಸರಿಯಾಗಿ ಇಲ್ಲದ್ದಿದ್ದರೆ ಕೋಪಿಸಿ ಕೊಳ್ಳುವ ಹಕ್ಕು ನಮಗಿಲ್ಲ.ಅಂತೂಕೋಪ ಸರಿಯಲ್ಲ ಎಂಬುವುದೇ ಇದರ ತಾತ್ಪರ್ಯ.
  •  ಮಳೆಗೂ ಮುನ್ನ ಕೆಲವೊಮ್ಮೆ ಮಾತ್ರ, ಆಗಸದಲ್ಲಿ ಕಾಮನಬಿಲ್ಲು ಮೂಡಿಬರುತ್ತದೆ.ಸಂತೋಷವೂ ಹಾಗೆಯೇ,ಜೀವನದಲ್ಲಿ ಆಗಾಗ ಬಂದು, ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ
  •  ಹಿಂದಿನ ಬಗ್ಗೆ ಯೋಚಿಸಿದರೆ ದುಃಖವಾದೀತು. ಮುಂದಿನ ಬಗ್ಗೆ ಚಿಂತಿಸಿದರೆ ಭಯ ವಾಗಬಹುದು. ಆದ್ದರಿಂದ ಇಂದಿನ ಬಗ್ಗೆ ಯೋಚಿಸೋಣ, ಇದರಿಂದ ನೆಮ್ಮದಿ,ಸಂತಸ ದೊರೆತೀತು.
  •  ಸುಂದರವಾದ ವಸ್ತುಗಳು ಉತ್ತಮವಾಗಿರಲೇ ಬೇಕೆಂದಿಲ್ಲ. ಆದರೆ ಉತ್ತಮ ವಸ್ತುಗಳು ಸದಾ ಸುಂದರವಾಗಿರುತ್ತದೆಸುಂದರವಾದ ಮುಖಕ್ಕಿಂತ, ಸುಂದರ ಹೃದಯವಂತರನ್ನು ಶೋದಿಸಬೇಕು.
  •  ಪುಸ್ತಕಗಳ್ಳನ್ನು ಓದುವುದರ ಮೂಲಕ, ಜಗತ್ತನ್ನು ಅತ್ಯಂತ ಸುಲಭ ವೆಚ್ಚದಲ್ಲಿ ನೋಡಬಹುದು.
  •  ಏಷ್ಟೇ ಅಡೆ- ತಡೆಗಳು ಎದುರಾದರು ಸೂರ್ಯ ಉದಯಿಸದೇ ಇರದು. ಅದೇ ರೀತಿ, ಜೀವನದಲ್ಲಿ ಗುರಿ ಸಾಧನೆಗೆ ಅಡ್ಡಿ- ಆತಂಕಗಳು ಎದುರಾಗುವುದು ಸಹಜ.ಅದಕ್ಕೆ, ಅಂಜಬಾರದು.
  •  ಇತರರು ನಮಗೆ ಏನು ಮಾಡಬೇಕೆಂದು ಅಪೇಕ್ಷಿಸುತ್ತೆವೆಯೋ, ಅಂಥಹವುದನ್ನು ನಾವೂ ಇತರರಿಗೆ ಮಾಡಬೇಕು.
  •  ಸಂಪತ್ತನ್ನು ಲಕ್ಷಸದವ್ರು ಹಲವರು ಇರಬಹುದು, ಆದರೆ ಸಂಪತ್ತನ್ನು ದಾನ ಮಾಡಬಲ್ಲ ಸಾಮಾರ್ತ್ಯಉಳ್ಳವರು ಇರುವುದು ಕೆಲವೇ ಮಂದಿ ಮಾತ್ರ
  •  ಭೂಮಿಯನ್ನು ಉತ್ತಿ-ಬಿತ್ತಿ ಮಳೆಯಾದರಷ್ಟೇ , ಉತ್ತಮ ಬೆಳೆ ಸಾಧ್ಯ. ರಾತ್ರೋರಾತ್ರಿ ಯಾವ ಚಮತ್ಕಾರವೂ ಆಗದುಹಾಗೇಯೇ ನಾವಂದುಕೊಂಡ ಕೆಲಸ, ಗುರಿ ತಲುಪ ಬೇಕಿದ್ದರೆ ಪರಿಶ್ರಮ ಪಡಬೇಕು
  •  ನೃತ್ಯವನ್ನು ನೃತ್ಯ ಮಾಡಿಯೇ ತೋರಿಸಬೇಕೇ ಹೊರತು ವಿಮರ್ಶೆ-ವಿವರಣೆಗಳಿಂದ ನೃತ್ಯದ ಸಾಕ್ಷಾತ್ಕಾರ ಸುಲಭ ಸಾಧ್ಯವಲ್ಲ.ಕಲೆಯ ಸತ್ಯವು ಕಲೆಯಿಂದಲೇ ಪ್ರಜ್ವಲಿಸಬೇಕು. ಆಗಲೇ ಕಲೆಯ ಸೌಂದರ್ಯವನ್ನು ತಿಳಿಯಬಹುದು.
  • ಇತರರಿಗೆ ಮಾರ್ಗದರ್ಶನ ಮಾಡುವುದು ಸುಲಭ. ಆದರೆ ನಾವೇ ಹೊಸ ಮಾರ್ಗ ಹುಡುಕುವುದು ಕಷ್ಟ.
  •  ದೇವರನ್ನು ನಾವು ದೇವಸ್ಥಾನದಲ್ಲಿ ಹುಡುಕುವ ಮೊದಲು ನಮ್ಮಲ್ಲಿಯೇ ಕಾಣಬೇಕು.
  • ಯೋಚಿಸಿ ನೋಡಿ, ನಮ್ಮ ಬದುಕಿನ ಸಾರ್ಥಕತೆ ಬೇರೆಲ್ಲೋ ಇದೆ. ಖಂಡಿತವಾಗಿ ಬಿರುದು ಪ್ರಶಸ್ತಿಗಳಲ್ಲಲ್ಲ.
  • ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ.

No comments:

Post a Comment